ETV Bharat / state

ಪ್ರಸವ ಪೂರ್ವ ಲಿಂಗ ಪತ್ತೆ - ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಧಾರವಾಡದ ಪರಿಸ್ಥಿತಿಯೇನು?

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್​ ಹೋಂ ಗಳನ್ನು ನಡೆಸುತ್ತಿಲ್ಲ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳು ಇಲ್ಲ, ಅಂತಹ ವಿಚಾರ ಇದ್ದರೂ ಈವರೆಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಡಿಎಚ್​​​​​ಒ ಡಾ.‌ ಯಶವಂತ ಮದೀನಕರ ಮಾಹಿತಿ ನೀಡಿದ್ದಾರೆ.

Preterm sex detection and Female feticide case of darwad
ಪ್ರಸವ ಪೂರ್ವ ಲಿಂಗ ಪತ್ತೆ-ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಧಾರವಾಡದ ಪರಿಸ್ಥಿತಿಯೇನು?
author img

By

Published : Mar 6, 2021, 5:53 PM IST

ಧಾರವಾಡ: ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದನ್ನು ತಡೆಯಲು ಸರ್ಕಾರ ಕಾನೂನುಗಳನ್ನು ರೂಪಿಸಿದೆ. ಕಾನೂನಿನ ಪ್ರಕಾರ, ಯಾವುದೇ ಆಸ್ಪತ್ರೆಗಳಲ್ಲಾಗಲಿ ಅಥವಾ ಲ್ಯಾಬ್​​ಗಳಲ್ಲಾಗಲಿ ತಾಯಿ ಗರ್ಭದಲ್ಲಿರುವ ಲಿಂಗ ಪತ್ತೆ ಮಾಡುವ ಹಾಗಿಲ್ಲ. ಹಾಗಾದ್ರೆ ಧಾರವಾಡ ಜಿಲ್ಲೆಯುಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳಿವೆಯೇ, ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್​​ ಹೋಂ ಗಳನ್ನು ನಡೆಸುತ್ತಿದ್ದಾರೆಯೇ ಎಂಬುದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಪ್ರಸವ ಪೂರ್ವ ಲಿಂಗ ಪತ್ತೆ-ಹೆಣ್ಣು ಭ್ರೂಣ ಹತ್ಯೆ - ಡಿಹೆಚ್​ಒ ಪ್ರತಿಕ್ರಿಯೆ

ಕಾಲ ಅದೆಷ್ಟೇ ಮುಂದುವರೆದರೂ ಕೆಲವು ವಿಚಾರಗಳು ಮಾನವನಿಂದ ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ಗಂಡು ಮಗುವಿನ ಹಂಬಲ - ಹೆಣ್ಣಿಗೆ ತಾತ್ಸಾರ ಅದರಲ್ಲೊಂದು. ಹಾಗಾಗಿ ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಹೇಯ ಕೃತ್ಯ ಇನ್ನೂ ಹಲವೆಡೆ ಮುಂದುವರೆದಿದೆ. ತಾಯಿ - ಮಗುವಿನ ರಕ್ಷಣೆಗೆ ಸದುಪಯೋಗವಾಗಲೆಂದು ತೆರದ ಸ್ಕಾನಿಂಗ್​ ಸೆಂಟರ್​ಗಳು ಇದೀಗ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆಯಾಗುತ್ತಿರುವುದು ದುರಂತವೇ ಸರಿ. ಆದರೆ ಧಾರವಾಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದಿಲ್ಲ ಎಂಬುದು ಆಶಾದಾಯಕ ವಿಚಾರ.

ಪ್ರಸವ ಪೂರ್ವ ಲಿಂಗ ಪತ್ತೆ-ಹೆಣ್ಣು ಭ್ರೂಣ ಹತ್ಯೆ:

ಈ ಕುರಿತು ಈಟಿವಿ ಭಾರತದೊಂದಿಗೆ ಡಿಎಚ್​​​ಒ ಡಾ.‌ ಯಶವಂತ ಮದೀನಕರ ಮಾತನಾಡಿ, ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್​ ಹೋಂ ಗಳನ್ನು ನಡೆಸುತ್ತಿಲ್ಲ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳು ಇಲ್ಲ, ಅಂತಹ ವಿಚಾರ ಇದ್ದರೂ ಈವರೆಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಅಲ್ಟ್ರಾ ಸ್ಕ್ಯಾನಿಂಗ್ ಕೇಂದ್ರಗಳು:

ಜಿಲ್ಲೆಯಲ್ಲಿ 212 ಅಲ್ಟ್ರಾ ಸ್ಕ್ಯಾನಿಂಗ್ ಕೇಂದ್ರಗಳು ನೋಂದಣಿಯಾಗಿವೆ. ಆ ಪೈಕಿ 69 ಕೇಂದ್ರಗಳು ಸ್ಥಗಿತಗೊಂಡಿವೆ. 143 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ಜಿಲ್ಲೆಯಲ್ಲಿ 12 ಸರ್ಕಾರಿ ಸ್ಕ್ಯಾನಿಂಗ್ ಕೇಂದ್ರಗಳಿವೆ. ಆ ಪೈಕಿ 1 ಕೇಂದ್ರ ಸ್ಥಗಿತಗೊಂಡಿದೆ ಎಂದು ತಿಳಿಸಿದರು.

ಹೇಯ ಕೃತ್ಯ ಕೊನೆಗಾಣಿಸಲು ಕ್ರಮ:

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಕಂಡು ಹಿಡಿಯುವ ಬಗ್ಗೆ ನಮ್ಮ ಗಮನಕ್ಕೆ ಈವರೆಗೂ ಬಂದಿಲ್ಲ. ಆ ಹೀನ ಕೃತ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಿರಂತರವಾಗಿ ತಿಳಿವಳಿಕೆ ನೀಡುವ ಕಾರ್ಯ ಮಾಡುತ್ತಿದ್ದೇವೆ. ಪ್ರತಿ ತಿಂಗಳು ಜಿಲ್ಲಾ ತಪಾಸಣಾ ತಂಡ ಹಾಗೂ ಮೇಲ್ವಿಚಾರಕರು ಭೇಟಿ‌ ನೀಡಿ ಪರಿಶೀಲನೆ ‌ಮಾಡುತ್ತಾರೆ. ಈವರೆಗೆ ಅನಧಿಕೃತ ಸ್ಕ್ಯಾನಿಂಗ್ ಯಂತ್ರಗಳಿರುವುದು ಕಂಡು ಬಂದಿಲ್ಲ. ಅನಧಿಕೃತ ಸ್ಕ್ಯಾನಿಂಗ್ ಯಂತ್ರಗಳು ಇರುವ ಬಗ್ಗೆ ಸಣ್ಣ ದೂರು ಬಂದರೂ ತುಂಬಾ ಮುತುವರ್ಜಿ ವಹಿಸಿ ಭೇಟಿ ನೀಡಿ ಕ್ರಮ ಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಓದಿ: ಭಾರತದಲ್ಲಿ ಪ್ರತಿವರ್ಷ ಹುಟ್ಟುತ್ತಲೇ ಕಳೆದುಹೋಗುತ್ತಾರೆ 4.5 ಲಕ್ಷ ಹೆಣ್ಣುಮಕ್ಕಳು!

2001ರ ಜನಗಣತಿ ಪ್ರಕಾರ 1000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳು ಇದ್ದರು. 2011ರ ಜನಗಣತಿ ಪ್ರಕಾರ 1000 ಗಂಡು ಮಕ್ಕಳಿಗೆ 944 ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.