ಧಾರವಾಡ: ಪ್ರತೀ ವರ್ಷ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ಕೊರೊನಾ ಎರಡನೇ ಅಲೆ ಜೊತೆಗೆ ಅಕಾಲಿಕ ಮಳೆ ಬರೆ ಎಳೆದಿದ್ದು, ಭರ್ಜರಿ ಇಳುವರಿ ಕನಸು ಕಂಡಿದ್ದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಧಾರವಾಡ ಹೊರವಲಯದಲ್ಲಿರುವ ಕೆಲಗೇರಿಯಲ್ಲಿ ಬಹತೇಕ ರೈತರು ಮಾವು ಬೆಳೆಯುತ್ತಾರೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮಾವು ಬೆಳೆ ನೆಲಕ್ಕುರುಳುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿದ್ದರೂ ಕೊರೊನಾ ವೈರಸ್ನಿಂದ ಸೂಕ್ತ ಮಾರುಕಟ್ಟೆ ಸಿಗದೇ ರೈತರು ಕಂಗಾಲಾಗಿದ್ದರು.
ಈ ವರ್ಷ ಅಕಾಲಿಕ ಮಳೆಯಿಂದಾಗಿ ಮಾವು ಮರದಲ್ಲೇ ಕೊಳೆಯುತ್ತಿದ್ದು, ಮಾವು ಬೆಳೆಗಾರರು ಮೂರರಿಂದ ನಾಲ್ಕು ಲಕ್ಷ ರೂ. ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.
ಓದಿ: ಸಹ್ಯಾದ್ರಿ ಕಾಲೇಜು ಜಾಗ ಪರಭಾರೆಗೆ ಮುಂದಾದ ಜಿಲ್ಲಾಡಳಿತ: ಹಳೇ ವಿದ್ಯಾರ್ಥಿಗಳಿಂದ ಆಕ್ರೋಶ