ಧಾರವಾಡ: ತಿರುಪತಿ ತಿಮ್ಮಪ್ಪನ ದೇವಸ್ಥಾನ ಆಸ್ತಿ ಮಾರಾಟ ವಿರೋಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ರವಾನಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನ ಉಳಿಸಿ ಅಭಿಯಾನದ ಪ್ರಯುಕ್ತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಜಗನ್ ಅವರ ಕಣ್ಣು ಕೇವಲ ದೇವಸ್ಥಾನಗಳ ಆಸ್ತಿ ಮೇಲೆ ಅಷ್ಟೇ ಏಕೆ ಎಂದು ಪ್ರಶ್ನಿಸಿದರು.
ತಿರುಪತಿ ದೇವಸ್ಥಾನ ಕೇವಲ ಆಂಧ್ರದ ಆಸ್ತಿ ಅಲ್ಲ, ಅದು ದೇಶದ ಹಾಗೂ ಜನರ ಆಸ್ತಿ ಎಂದು ಮುತಾಲಿಕ್ ಹೇಳಿದ್ದಾರೆ.