ETV Bharat / state

ನಾವ್ ಯಾವತ್ತೂ ನೆಹರು ಅವರನ್ನ ಮೋದಿ ಜೊತೆ ಕಂಪೇರ್ ಮಾಡೇ ಇಲ್ಲ: ಪ್ರಹ್ಲಾದ್ ಜೋಶಿ

ಈ ದೇಶದಲ್ಲಿ ಹೆಡ್ಗೇವಾರ್ ಆರ್ ಎಸ್ ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕ. ಮುಸ್ಲಿಂ ತುಷ್ಟೀಕರಣ ಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡ್ತಿದ್ದಾರೆ. ಆರ್​​ಎಸ್​ಎಸ್​ ನವರು ಮೂಲ ನಮ್ಮ ದೇಶದವರಲ್ಲ ಎನ್ನೋ ಸಿದ್ದು ಹೇಳಿಕೆ ಜೋಶಿ ತೀರುಗೇಟು ನೀಡಿದರು.

ನಾವ್ ಯಾವತ್ತು ನೆಹರು ಅವರನ್ನ ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ ಎಂದ ಪ್ರಹ್ಲಾದ್ ಜೋಶಿ

author img

By

Published : May 27, 2022, 4:49 PM IST

Updated : May 27, 2022, 5:05 PM IST

ಹುಬ್ಬಳ್ಳಿ: ನಾವ್ ಯಾವತ್ತೂ ನೆಹರು ಅವರನ್ನ ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ. ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರೋ ನಾಯಕ. ಸಾಕಷ್ಟು ಬಜೆಟ್ ಮಂಡಿಸಿದವರು, ಅವರ ವೈಚಾರಿಕತೆ ಅವರಿಗರಲಿ. ರಾಹುಲ್ ಗಾಂಧಿ ಪ್ಲೀಜ್ ಮಾಡಲು ಈ ರೀತಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ. ಈ ದೇಶದಲ್ಲಿ ಹೆಡ್ಗೇವಾರ್ ಆರ್ ಎಸ್ ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕ. ಮುಸ್ಲಿಂ ತುಷ್ಟೀಕರಣ ಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡ್ತಿದ್ದಾರೆ. ಆರ್​​ಎಸ್​ಎಸ್​ ನವರು ಮೂಲ ನಮ್ಮ ದೇಶದವರಲ್ಲ ಎನ್ನೋ ಸಿದ್ದು ಹೇಳಿಕೆಗೆ ಜೋಶಿ ತೀರುಗೇಟು ನೀಡಿದರು.

ನಾವ್ ಯಾವತ್ತೂ ನೆಹರು ಅವರನ್ನ ಮೋದಿ ಜೊತೆ ಕಂಪೇರ್ ಮಾಡೇ ಇಲ್ಲ: ಪ್ರಹ್ಲಾದ್ ಜೋಶಿ

ಹೆಡ್ಗೇವಾರ್ ಯಾರು ಏನು ಮಾಡಿದರು ತಿಳಿದುಕೊಳ್ಳಲಿ. ಎಲ್ಲ ತಿಳಿದುಕೊಂಡು ಮಾತನಾಡಿದರೆ ಅದು ತಪ್ಪು. ಅವರು ಸೇವಾದಳದಲ್ಲಿದ್ದರು ಎನ್ನೋದು ಗೊತ್ತಿಲ್ವಾ. ಅವರೊಬ್ಬರು ಜನ್ಮಜಾತ ದೇಶಭಕ್ತರು. ಸಿದ್ದುಗೆ ಆರ್ ಎಸ್ ಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ದರೂ ನಾಟಕ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅನ್ಕೊಂಡಿದ್ದಾರೆ. ಅದನ್ನ ಬಿಟ್ಟು ಹೊರಗಡೆ ಬರಬೇಕು. ಸಿದ್ದರಾಮಯ್ಯ ಪ್ರಧಾನಿಯನ್ನ ಕೂಡಾ ಬಾಯಿಗೆ ಬಂದಾಗೇ ಬೈದಿದ್ದರು. ಕೆಲ ಗದ್ಯವನ್ನ ಇವರೇ ತೆಗೆದು,ಇವರೇ ಡ್ರಾಮ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯನವರೇ ಜನ ನಿಮ್ಮನ್ನ ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರಗಳಲ್ಲಿ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನ ಮೂಲೆಯಲ್ಲಿ ತಳ್ಳಿದ್ದಾರೆ ಎಂದು ಇದೇ ವೇಳೆ ತಿರುಗೇಟು ನೀಡಿದರು.

ಇದನ್ನೂ ಓದಿ : ಸಿಬಿಐ‌ ಮೇಲೆ ಆರೋಪ ಮಾಡೋರಿಗೆ ಕೋರ್ಟ್​ ಮೇಲೆ ವಿಶ್ವಾಸವಿಲ್ಲ ಎಂದರ್ಥ: ಸಚಿವ ನಾರಾಯಣಸ್ವಾಮಿ

Last Updated : May 27, 2022, 5:05 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.