ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದರು. ನಾಳೆ ಸಂಜೆ ಶಾಸಕರ ಹಾಗೂ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಮೇಯರ್, ಉಪ ಮೇಯರ್ ಬಗ್ಗೆ ತೀರ್ಮಾನ ಪ್ರಕಟವಾಗುತ್ತದೆ ಎಂದರು.
ಈ ಕುರಿತು ಮಾತನಾಡಿದ ಅವರು, ಡಿ ಕೆ ಶಿವಕುಮಾರ್ಗೆ ಇಡಿ ನೋಟಿಸ್ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ಇ ಡಿ ಮತ್ತೆ ವಿಚಾರಣೆಗೆ ಡಿ ಕೆ ಶಿವಕುಮಾರ್ಗೆ ನೋಟಿಸ್ ನೀಡಿರಬಹುದು. ಹಾಗಾಗಿ, ನೋಟಿಸ್ ಬಂದಿರಬೇಕು ಎಂದರು. ಕಾಂಗ್ರೆಸ್ಸಿನ ಮುಖಂಡರುಗಳು ಬಿಜೆಪಿ ಪಕ್ಷಕ್ಕೆ ಬರೋದಕ್ಕೆ ಉತ್ಸುಕರಾಗಿದ್ದಾರೆ. ನಮ್ಮ ರಾಜ್ಯ ಮುಖಂಡರುಗಳ ಜೊತೆ ಅವರೆಲ್ಲ ಮಾತನಾಡುತ್ತಿದ್ದಾರೆ. ಪಕ್ಷ ಯಾರನ್ನು ಸೇರಿಸಿಕೊಳ್ಳಬೇಕು ಅನ್ನೋದನ್ನು ತೀರ್ಮಾನಿಸುತ್ತದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಮತ್ತೆ ಆರಂಭವಾದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶದ ಸಂವಿಧಾನವನ್ನು ಗೌರವಿಸಬೇಕು. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಅದನ್ನು ಪಾಲನೆ ಮಾಡಬೇಕು. ಹಿಜಾಬ್ ಕುರಿತು ಪ್ರತಿಭಟನೆ ಮಾಡುವವರಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದರು.
ಓದಿ: ಡಿಕೆಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದಕ್ಕೆ ಹೆದರುವ ಅಗತ್ಯವಿಲ್ಲ : ಡಿ ಕೆ ಸುರೇಶ್