ETV Bharat / state

ಸಿಎಂ ಬೊಮ್ಮಾಯಿ ಅವರು ಸದಾಶಿವ ಆಯೋಗದ ವರದಿಯನ್ನು ಧೈರ್ಯದಿಂದ ಜಾರಿ ಮಾಡಿದ್ದಾರೆ: ಪ್ರಹ್ಲಾದ್​ ಜೋಶಿ - Prahlada Joshi congratulates C M

ರಾಜ್ಯದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.

prahlada-joshi-congratulates-c-m-basavaraj-bommai
ಸಿಎಂ ಸದಾಶಿವ ಆಯೋಗದ ವರದಿಯನ್ನು ಧೈರ್ಯದಿಂದ ಅನುಷ್ಠಾನ ಮಾಡಿದ್ದಾರೆ: ಪ್ರಹ್ಲಾದ ಜೋಶಿ
author img

By

Published : Mar 26, 2023, 4:27 PM IST

Updated : Mar 26, 2023, 5:01 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಾದರೂ ಘೋಷಣೆ ಆಗಬಹುದೆಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸದಾಶಿವ ಆಯೋಗದ ವರದಿಯನ್ನು ಅತ್ಯಂತ ಧೈರ್ಯದಿಂದ ಜಾರಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಂತರ ಸಚಿವ ಮುರುಗೇಶ್​ ನಿರಾಣಿ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದಿನ ಸರ್ಕಾರಗಳು ಮಾಡದ ಕೆಲಸವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಸಚಿವ ಸಂಪುಟ ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಮೀಸಲಾತಿಯನ್ನು ತಂದುಕೊಟ್ಟಿರೋದಕ್ಕೆ ರಾಜ್ಯದ ಏಳು ಕೋಟಿ ಜನತೆಯ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಯಾರಿಗೂ ಅನ್ಯಾಯ ಆಗದಂತೆ ಒಳಮೀಸಲಾತಿ ನೀಡಿದ್ದಾರೆ: ವಿಶೇಷವಾಗಿ ವೀರಶೈವ ಸಮಾಜದ ಮೀಸಲಾತಿಯನ್ನು 5% ನಿಂದ 7% ಕ್ಕೆ ಏರಿಕೆ, ಒಕ್ಕಲಿಗ ಸಮಾಜದ ಮೀಸಲಾತಿಯನ್ನು 4 ರಿಂದ 6 ಕ್ಕೆ ಹೆಚ್ಚಳ ಮಾಡಿದ್ದಾರೆ. ಯಾರಿಗೂ ಅನ್ಯಾಯ ಆಗದಂತೆ ಒಳಮೀಸಲಾತಿ ನೀಡಿದ್ದಾರೆ. ಇದು ಒಳ್ಳೆಯ ದಿಕ್ಸೂಚಿ, ಇದರಿಂದ ಎಲ್ಲ ವರ್ಗದ ಸ್ವಾಮೀಜಿಗಳು, ಸಮಾಜದ ಬಂಧುಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಅವರ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯಾರು ಮಾಡದೇ ಇರೋ‌ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ: ಇನ್ನು ಒಳ ಮೀಸಲಾತಿ ಚುನಾವಣೆ ಗಿಮಿಕ್​ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೀಸಲಾತಿ ಕರಿತು ಕಳೆದ ಎರಡು ವರ್ಷಗಳ ಹಿಂದೆಯೇ ಪ್ರಕ್ರಿಯೆ ಪ್ರಾರಂಭವಾಗಿತ್ತು. ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್​ ಹೆಗ್ಡೆಯವರು ಇಡೀ ರಾಜ್ಯ ಸುತ್ತಿ ಮಧ್ಯಂತರ ವರದಿಯನ್ನು 6‌ ತಿಂಗಳ ಹಿಂದೆಯೇ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲೂ ಇದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಅಧ್ಯಯನ ಮಾಡಿ ವರದಿ ನೀಡುವುದಕ್ಕೆ ತಡವಾಗಿದ್ದರಿಂದ ಕೊನೆ ಗಳಿಗೆಯಲ್ಲಿ ಮಾಡಿದ್ದೇವೆ. ಯಾರು ಮಾಡದೇ ಇರೋ‌ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳಿದರು.

ಕೆಲವರು ಪಂಚಮಸಾಲಿ ಸಮಾಜದ ಮೀಸಲಾತಿ ಒಪ್ಪದೇ ಇರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಒಪ್ಪಿಕೊಂಡಿಲ್ಲವೋ ಅವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. 2013ರಿಂದ 18ರವರೆಗೆ ಅವರದ್ದೇ ಸರ್ಕಾರ ಇತ್ತು. ಯಾರೂ ಒಪ್ಪಿಲ್ಲವೋ ಅವರೇ ಎಂಎಲ್ಎ ಆಗಿದ್ದರು. ಅವರ ಕುಟುಂಬದವರು ಶಾಸಕರು, ಮಂತ್ರಿಗಳು ಆಗಿದ್ದರು. ಆ ಸಮಯದಲ್ಲಿ ‌ಯಾಕೆ ಮಾಡಿಲ್ಲ ಎಂದು‌ ನಿರಾಣಿ ಪ್ರಶ್ನಿಸಿದರು.

ರಾಜಕಾರಣದ ಸಲುವಾಗಿ ವಿರೋಧ ಮಾಡಿದರೇ ಅದು ಗಣನೆಗೆ ಬರಲ್ಲ-ನಿರಾಣಿ: ಮೀಸಲಾತಿ ಹೋರಾಟ 30 ವರ್ಷದಿಂದ ಇದೆ. ಇದರಲ್ಲಿ ಯಾವುದೇ ಸಮಾಜಕ್ಕೆ ತೊಂದರೆ ಆಗದಂತೆ ಯಾವುದೇ ಸಮಾಜ ಮೀಸಲಾತಿ ಕಿತ್ತುಕೊಳ್ಳದೇ ಹೊಸದಾಗಿ ಈ ಅನುಕೂಲ ಮಾಡಿಕೊಳ್ಳಲಾಗಿದೆ. ಇಡೀ ಒಕ್ಕಲಿಗ ಸಮಾಜ, ಪಂಚಮಸಾಲಿ ಸಮಾಜ ಹಾಗೂ ಹಿಂದುಳಿದ ಸಮಾಜದವರು ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲೋ ಒಬ್ಬಿಬ್ಬರು ರಾಜಕಾರಣದ ಸಲುವಾಗಿ ವಿರೋಧ ಮಾಡಿದರೇ ಅದು ಗಣನೆಗೆ ಬರಲ್ಲ ಎಂದು ಸಚಿವ ನಿರಾಣಿ ಹೇಳಿದರು.

ಇದನ್ನೂ ಓದಿ:ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡ್ತಿದೆ: ಹೆಚ್ ಡಿ ಕುಮಾರಸ್ವಾಮಿ

Last Updated : Mar 26, 2023, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.