ETV Bharat / state

ಚುನಾವಣೆಯಲ್ಲಿ ಜಾತಿ ರಾಜಕಾರಣ ಮುನ್ನಲೆಗೆ ಬರುವುದಿಲ್ಲ: ಪ್ರದೀಪ್​ ಶೆಟ್ಟರ್ - ಜಾತಿ ರಾಜಕಾರಣ ಬಗ್ಗೆ ಪ್ರದೀಪ್​ ಶೆಟ್ಟರ್ ಪ್ರತಿಕ್ರಿಯೆ

ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಮತವನ್ನು ಪಡೆಯುವ ವಿಶ್ವಾಸ ನನಗಿದೆ ಎಂದು ವಿಧಾನ ಪರಿಷತ್ ಅಭ್ಯರ್ಥಿ ಪ್ರದೀಪ್​ ಶೆಟ್ಟರ್ ಹೇಳಿದ್ದಾರೆ..

pradeep-shetter-on-mlc-election
ವಿಧಾನ ಪರಿಷತ್ ಅಭ್ಯರ್ಥಿ ಪ್ರದೀಪ್​ ಶೆಟ್ಟರ್
author img

By

Published : Dec 1, 2021, 5:43 PM IST

ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಜಾತಿ ರಾಜಕಾರಣ ಮುನ್ನೆಲೆಗೆ ಬರುವುದಿಲ್ಲ ಎಂದು ವಿಧಾನ ಪರಿಷತ್ ಅಭ್ಯರ್ಥಿ ಪ್ರದೀಪ್​ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ, ಇಲ್ಲಿ ಯಾವುದೇ ಜಾತಿ ರಾಜಕಾರಣದ ಪ್ರಶ್ನೆಯೇ ಬರುವುದಿಲ್ಲ ಎಂದರು.

ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಪ್ರದೀಪ್​ ಶೆಟ್ಟರ್ ಮಾತನಾಡಿರುವುದು..

ಹಾವೇರಿಯಿಂದ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದರಿಂದ ನಮಗೆ ಯಾವುದೇ ಹಾನಿಯಾಗುವುದಿಲ್ಲ. ಎಲ್ಲ ಜಾತಿಯವರು ನನ್ನ ಜೊತೆಗೆ ಇದ್ದಾರೆ. ಅಲ್ಲದೇ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಮತವನ್ನು ಪಡೆಯುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಓದಿ: ನಾನು ಸಾವಿಗೆ ಹೆದರುವವನಲ್ಲ: ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.