ETV Bharat / state

ಹುಬ್ಬಳ್ಳಿ: ನಂಬರ್​ ಪ್ಲೇಟ್​ ಇಲ್ಲದ 80ಕ್ಕೂ ಹೆಚ್ಚು ವಾಹನ ಜಪ್ತಿ - ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೆಟ್

ನಂಬರ್​ ಪ್ಲೇಟ್​ ಇಲ್ಲದ ವಾಹನಗಳ ವಿರುದ್ಧ ಕಾರ್ಯಾಚರಣೆ ಮಾಡುವುದರ ಜೊತೆಗೆ ವಾಹನಗಳಲ್ಲಿ ಸ್ಫೋಟಕ ವಸ್ತುಗಳ ಕುರಿತು ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Police High Alert
ಖಾಕಿ ಪಡೆ ಕಾರ್ಯಾಚರಣೆ
author img

By

Published : Nov 25, 2022, 1:42 PM IST

ಹುಬ್ಬಳ್ಳಿ: ಮಂಗಳೂರು ಸ್ಫೋಟ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಕಾರ್ಯಾಚರಣೆಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೆಟ್ ಮುಂದುವರೆಸಿದ್ದು, ರಸ್ತೆಗಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಮೂವತ್ತು ಜನರ ತಂಡ ಪರಿಶೀಲನೆ ನಡೆಸಲು ಪ್ರಾರಂಭಿಸಿದ್ದಾರೆ. ತಡರಾತ್ರಿ 80ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಖಾಕಿ ಪಡೆ ಕಾರ್ಯಾಚರಣೆ

ಕೇಶವಪುರ, ದಕ್ಷಿಣ, ಉತ್ತರ ಸಂಚಾರ, ಹಳೇ ಹುಬ್ಬಳ್ಳಿ, ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದೆ. ವಾಹನಗಳಲ್ಲಿ ಸ್ಫೋಟಕ ವಸ್ತುಗಳ ಕುರಿತು ಸಹ ಶೋಧ ನಡೆಸಲಾಗುತ್ತಿದೆ.

ನಗರದಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದು, ವಿವಿಧ ಪೊಲೀಸ್ ಠಾಣಾ ಸ್ಥಳಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಅಷ್ಟೇ ಅಲ್ಲದೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ ಓಡಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಭದ್ರತೆ‌ ಪರಿಶೀಲಿಸಿದ ಎಸ್ಪಿ ಸೌಮ್ಯಲತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.