ಹುಬ್ಬಳ್ಳಿ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ನಗರದ ಚೆನ್ನಮ್ಮ ಸರ್ಕಲ್‌ನಲ್ಲಿ 50ಕ್ಕೂ ಹೆಚ್ಚು ಬೈಕ್, ಐದು ಕಾರುಗಳನ್ನು ಪೊಲೀಸರು ಸೀಜ್ ಮಾಡಿದರು.
ಲಾಕ್‌ಡೌನ್ ಉಲ್ಲಂಘಟನೆ ಮಾಡುವವರಿಗೆ ಪೊಲೀಸರು ಬಸ್ಕಿ ಹೊಡೆಸಿ, ಲಾಠಿ ರುಚಿ ತೋರಿಸಿದರು.
ಆಡಿ ಕಾರಿನ ಚಾಲಕನೋರ್ವ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಾಲನೆ ಮಾಡುತ್ತಿದ್ದ. ಆತನಿಗೆ ಪೊಲೀಸರು ಸ್ಥಳದಲ್ಲಿಯೇ ದಂಡ ಹಾಕಿದರು.
ಮುಂಜಾನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಟ ನಡೆಸುತ್ತಿದ್ದರು. ಎಷ್ಟೇ ಹೇಳಿದ್ರೂ ಮಾತು ಕೇಳದ ಜನರಿಗೆ ವಾಹನಗಳನ್ನ ಸೀಜ್ ಮಾಡಿ ಪೊಲೀಸರು ಲಾಠಿ ಬೀಸಿದರು.