ಹುಬ್ಬಳ್ಳಿ: ರಭಸವಾಗಿ ಹರಿಯುತ್ತಿರುವ ಬೆಣ್ಣೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನೋರ್ವನನ್ನು ನಗರ ಮೀಸಲು ಪಡೆಯ ಪೇದೆಯೊಬ್ಬರು ರಕ್ಷಿಸಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![Police rescue old man in Hubballi](https://etvbharatimages.akamaized.net/etvbharat/prod-images/kn-hbl-11-police-rescue-old-man-av-7208089_17082020224945_1708f_1597684785_845.jpg)
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಇಮಾಂಸಾಬ್ ಕರೀಮಸಾಬ್ ಬೆಳಗಲಿ (72) ಎಂಬವರು ಊರ ಹೊರ ವಲಯದ ನಾರಾಯಣಪುರ ಗ್ರಾಮ ಬಳಿಯ ಬೆಣ್ಣೆ ಹಳ್ಳದ ದಂಡೆಯಲ್ಲಿ ಉರುವಲು ಕಟ್ಟಿಗೆ ತರಲು ಸೋಮವಾರ ಹೋಗಿದ್ದರು. ಕಟ್ಟಿಗೆ ಕಡಿಯುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದರು.
![Police rescue old man in Hubballi](https://etvbharatimages.akamaized.net/etvbharat/prod-images/kn-hbl-11-police-rescue-old-man-av-7208089_17082020224945_1708f_1597684785_215.jpg)
ಇದನ್ನು ಗಮನಿಸಿದ್ದ ಯುವಕರಿಬ್ಬರು ವೃದ್ಧನನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗದೇ ಅಸಹಾಯಕರಾಗಿ ಅಲ್ಲಿಯೇ ನಿಂತಿದ್ದರು. ಇದೇ ವೇಳೆ ಕರ್ತವ್ಯಕ್ಕೆಂದು ಹುಬ್ಬಳ್ಳಿಯತ್ತ ತೆರಳುತ್ತಿದ್ದ ಯರಗುಪ್ಪಿ ಗ್ರಾಮದ ಪ್ರದೀಪ ಮಹಾದೇವಪ್ಪ ಅಣ್ಣಿಗೇರಿ ಎಂಬ ಮೀಸಲು ಪಡೆಯ ಪೇದೆಗೆ ವಿಷಯ ತಿಳಿಸಿದ್ದಾರೆ.
![Police rescue old man in Hubballi](https://etvbharatimages.akamaized.net/etvbharat/prod-images/kn-hbl-11-police-rescue-old-man-av-7208089_17082020224945_1708f_1597684785_200.jpg)
ಕೂಡಲೇ ಕಾರ್ಯಪ್ರವೃತರಾದ ಪ್ರದೀಪ್, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧ ಇಮಾಂಸಾಬ್ ಬೆಳಗಲಿ ಅವರನ್ನು ರಕ್ಷಿಸಿದ್ದಾರೆ. ಪೇದೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
![Police rescue old man in Hubballi](https://etvbharatimages.akamaized.net/etvbharat/prod-images/kn-hbl-11-police-rescue-old-man-av-7208089_17082020224945_1708f_1597684785_215.jpg)