ETV Bharat / state

ಹೊಸ ವರ್ಷಾಚರಣೆ ವೇಳೆ ಕಾನೂನು ಬಾಹಿರ ವರ್ತನೆ ಮಾಡಿದ್ರೆ ಹುಷಾರ್​​...ಪೊಲೀಸ್​​ ಆಯುಕ್ತರ ಎಚ್ಚರಿಕೆ - hubli new year celebration preperation news

ಹೊಸ ವರ್ಷಾಚರಣೆ ವೇಳೆ ಅನುಚಿತ ಹಾಗೂ ಕಾನೂನುಬಾಹಿರ ವರ್ತನೆ ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

police
ಪೊಲೀಸ್​​ ಆಯುಕ್ತರ ಎಚ್ಚರಿಕೆ
author img

By

Published : Dec 30, 2019, 4:42 PM IST

ಹುಬ್ಬಳ್ಳಿ: ಹೊಸ ವರ್ಷದ ಆಚರಣೆ ಹೆಸರಲ್ಲಿ ಅನೈತಿಕ ವರ್ತನೆ ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಹೊಸ ವರ್ಷವನ್ನು ಸಂತೋಷದಿಂದ ಆಚರಣೆ ಮಾಡುವ ಮೂಲಕ ಯಾವುದೇ ಅವಘಡಗಳು ಸಂಭವಿಸಿದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು.ಯಾವುದೇ ಸಂಘಟನೆಗಳ ಹೆಸರಲ್ಲಿ ಹೋಗಿ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು.

ಪೊಲೀಸ್​​ ಆಯುಕ್ತರ ಎಚ್ಚರಿಕೆ

ಈಗಾಗಲೇ ಹು-ಧಾ ಮಹಾನಗರದ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್​​​​ಗಳಿಗೂ ಮಾಹಿತಿ ನೀಡಲಾಗಿದ್ದು, ಬೌನ್ಸರ್ ಹಾಗೂ ನೈಟ್ ವಿಷನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಗಾಂಜಾ ಅಫೀಮು ಹಾಗೂ ಇತರ ಕಾನೂನು ಬಾಹಿರ ಮಾಧಕ ಸೇವನೆಗಳಿಗೆ ಅವಕಾಶ ನೀಡಿದರೆ ಅಂತಹ ಹೊಟೇಲ್ ಹಾಗೂ ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ವೇಳೆ ಅವಘಡ ಸಂಭವಿಸಿದರು ಕೂಡ ಪೊಲೀಸ್​​ ಇಲಾಖೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಹೋಟೆಲ್​​ ಹಾಗೂ ರೆಸ್ಟೋರೆಂಟ್ ಮರ್ಯಾದೆಯ ಹಿನ್ನೆಲೆ ಘಟನೆಯನ್ನು ಮರೆಮಾಚಲು ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದರು.

ಹೊಸವರ್ಷ ಹರ್ಷದಿಂದ ಕೂಡಿರಲಿ ಅದನ್ನು ಬಿಟ್ಟು ಕುಡಿದ ಮತ್ತಿನಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಬೇಡಿ.ಅಲ್ಲದೇ ಪೊಲೀಸ್​​ ಚಕ್ಕಿಂಗ್ ಮಾಡಲಾಗುತ್ತಿದ್ದು,ಯಾವುದೇ ಸಾರ್ವಜನಿಕರು ಪೊಲೀಸ್​​ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಬೇಡಿ ಎಂದು ಸಲಹೆ ನೀಡಿದರು. ಬಾರ್ ಆ್ಯಂಡ್ ರೆಸ್ಟೋರೆಂಟ್​​ಗಳು ಸ್ಪೇರ್ ಆ್ಯಂಡ್ ಕ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಕುಡಿದ ಅಮಲಿನಲ್ಲಿರುವ ಗ್ರಾಹಕರನ್ನು ಮನೆಗೆ ಕಳಿಸುವ ಕಾರ್ಯ ಮಾಡಬೇಕು. ಒಂದು ವೇಳೆ ಸಾಧ್ಯವಾಗದ ಹಿನ್ನೆಲೆ ಪೊಲೀಸರ ಗಮನಕ್ಕೆ ತರಬೇಕು ಎಂದ ಅವರು, ಹೊಸ ವರ್ಷದ ಆಚರಣೆಯನ್ನು ಸಂತೋಷದಿಂದ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಹೇಳಿದರು.

Intro:ಹುಬ್ಬಳ್ಳಿ-03

ಹೊಸ ವರ್ಷದ ಆಚರಣೆ ಹೆಸರಲ್ಲಿ ನೈತಿಕ ಪೊಲೀಸ ಗಿರಿ ಮಾಡುವ ಮೂಲಕ ಅನೈತಿಕ ವರ್ತನೆ ಕಂಡು ಬಂದರೇ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆರ್.ದೀಲಿಪ್ ಎಚ್ಚರಿಕೆ ನೀಡಿದ್ದಾರೆ.
ಈಟಿವಿ ಭಾರತ ಗ್ರೂಪ್ ಹಾಗೂ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿ ಮಾತನಾಡಿದ ಅವರು, ಹೊಸ ವರ್ಷವನ್ನು ಸಂತೋಷದಿಂದ ಆಚರಣೆ ಮಾಡಿ ಯಾವುದೇ ಅವಘಡಗಳು ಸಂಭವಿಸಿದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು.

ಯಾವುದೇ ಸಂಘಟನೆಗಳ ಹೆಸರಲ್ಲಿ ಹೋಗಿ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈಗಾಗಲೇ ಹು-ಧಾ ಮಹಾನಗರದ ಎಲ್ಲಾ ಹೊಟೇಲ್ ಹಾಗೂ ರೆಸ್ಟೋರೆಂಟಗಳಿಗೂ ಮಾಹಿತಿ ನೀಡಲಾಗಿದ್ದು, ಬೌನ್ಸರ್ ಹಾಗೂ ನೈಟ್ ವಿಷನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದ ಅವರು,ಗಾಂಜಾ ಅಫೀಮು ಹಾಗೂ ಇತರ ಕಾನೂನು ಬಾಹಿರ ಮಾಧಕ ಸೇವನೆಗಳಿಗೆ ಅವಕಾಶ ನೀಡಿದರೆ ಅಂತಹ ಹೊಟೇಲ್ ಹಾಗೂ ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ವೇಳೆ ಅವಘಡ ಸಂಭವಿಸಿದರು ಕೂಡ ಪೊಲೀಸ ಇಲಾಖೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಹೊಟೇಲ್ ಹಾಗೂ ರೆಸ್ಟೋರೆಂಟ್ ಮರ್ಯಾದೆಯ ಹಿನ್ನೆಲೆಯಲ್ಲಿ ಘಟನೆಯನ್ನು ಮರೆಮಾಚಲು ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದರು.

ಹೊಸ ವರ್ಷ ಹರ್ಷದಿಂದ ಕೂಡಿರಲಿ ಅದನ್ನು ಬಿಟ್ಟು ಕುಡಿದ ಮತ್ತಿನಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಬೇಡಿ.ಅಲ್ಲದೇ ಪೊಲೀಸ ಚಕ್ಕಿಂಗ್ ಮಾಡಲಾಗುತ್ತಿದ್ದು,ಯಾವುದೇ ಸಾರ್ವಜನಿಕರು ಪೊಲೀಸ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಬೇಡಿ ಎಂದು ಸಲಹೆ ನೀಡಿದರು.
ಈಗಾಗಲೇ ಹೊಟೇಲ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟಗಳಿಗೆ ಮಾಹಿತಿ ನೀಡಲಾಗಿದ್ದು,ಸ್ಪೇರ್ ಆ್ಯಂಡ್ ಕ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಕುಡಿದ ಅಮಲಿನಲ್ಲಿರುವ ಗ್ರಾಹಕರನ್ನು ಮನೆಗೆ ಕಳಿಸುವಂತ ಕಾರ್ಯವನ್ನು ಮಾಡಬೇಕು. ಒಂದು ವೇಳೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದ ಅವರು,ಹೊಸ ವರ್ಷದ ಆಚರಣೆಯನ್ನು ಸಂತೋಷದಿಂದ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಹೇಳಿದರು.

ಬೈಟ್ - ಆರ್ ದಿಲೀಪ್, ಹು- ಧಾ ಪೊಲೀಸ್ ಆಯುಕ್ತBody:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.