ಹುಬ್ಬಳ್ಳಿ : ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ವಿರುದ್ಧ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ನಿರ್ಧಾರ ಕೈಗೊಂಡಿದೆ.
ಫ್ರೂಟ್ ಇರ್ಫಾನ್ ಮತ್ತು ಈತನ ಸಹಚರರು ಸಾರ್ವಜನಿಕರಿಗೆ ಮೋಸ ಮಾಡಿ ಭೂ ಕಬಳಿಸಿದ ಬಗ್ಗೆ, ಧಮಕಿ ಹಾಕಿ ಹಣ ಪಡೆದುಕೊಂಡಿದ್ದರೆ, ಈತನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿದ್ದರೆ, ಹಾಗೂ ಈಗಾಗಲೇ ದೂರು ನೀಡಿ ನ್ಯಾಯ ದೊರಕದೆ ಇದ್ದವರು, ಹೆದರಿಕೆಯಿಂದ ದೂರು ನೀಡದೆ ಇರುವವರು ಮತ್ತು ಫ್ರೂಟ್ ಇರ್ಫಾನ್ ಬಗ್ಗೆ ಸಹಾನುಭೂತಿ ಹೊಂದಿದವರು ಇದೇ ಸೆ. 3 ರಂದು ಬೆಳಗ್ಗೆ 12 ಗಂಟೆಗೆ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಧಾರವಾಡ ವಿಭಾಗ ಕಚೇರಿಗೆ ಬಂದು ನಿರ್ಭಯವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ದೂರುದಾರರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.