ಹುಬ್ಬಳ್ಳಿ: ಮಾಸಾಶನ ಹಾಗೂ ಸಹಾಯಧನಕ್ಕೆ ಆಗ್ರಹಿಸಿ ಸರ್ವಧರ್ಮ ಯುವಕ ಮಂಡಳದ ನೇತೃತ್ವದಲ್ಲಿ ವಿಶೇಷಚೇತನರು ಪ್ರತಿಭಟನೆ ನಡೆಸಿದರು.
ನಗರದ ತಹಶೀಲ್ದಾರ್ ಕಚೇರಿ ಎದುರು ಲಾಕ್ಡೌನ್ ಮಧ್ಯೆಯೂ ಪ್ರತಿಭಟನೆ ನಡೆಸಿದ ಅವರು, ರಾಜ್ಯ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗಿಲ್ಲ.ಅದನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ ಸರಿಯಾದ ಸಮಯಕ್ಕೆ ಹಣ ಕೈ ಸೇರುತ್ತಿಲ್ಲ, ಇದರಿಂದ ಕಷ್ಟ ಅನುಭವಿಸುವಂತಾಗಿದೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳು ಈವರೆಗೂ ದೊರೆತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪಡಿತರ ವಿತರಣೆಯಲ್ಲಿ ಅಕ್ಕಿ ಗೋಧಿ ಬಿಟ್ಟರೇ ಬೇರೆ ಯಾವುದೇ ಮೂಲಭೂತ ಸಾಮಗ್ರಿಗಳನ್ನು ಹಂಚಿಕೆ ಮಾಡಿಲ್ಲ ಹೀಗಾಗಿ ಕುಟುಂಬದ ನಿರ್ವಹಣೆ ಕಷ್ಟವಾಗಿದೆ ಎಂದು ಅವರು ದೂರಿದರು.ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೇತ್ತುಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.