ಧಾರವಾಡ: ಕೊರೊನಾ ಮಹಾಮಾರಿಯಿಂದ ಆದ ನಷ್ಟಕ್ಕೆ ಸಹಾಯ ಮಾಡುವಂತೆ ಆಗ್ರಹಿಸಿ ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮನವಿ ಸಲ್ಲಿಸಲಾಯಿತು
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಸದಸ್ಯರು, ಧಾರವಾಡ ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 200 ಜನರು ತಮ್ಮ ಜೀವನಾಧಾರಕ್ಕಾಗಿ ಫೋಟೋಗ್ರಫಿ ವೃತ್ತಿ ಅವಲಂಬಿಸಿದ್ದಾರೆ. ಮಾರ್ಚ್,ಏಪ್ರಿಲ್,ಮೇ ತಿಂಗಳಲ್ಲಿ ಮದುವೆ ಹಾಗೂ ಇನ್ನಿತರ ಸಭೆ-ಸಮಾರಂಭ ಹೆಚ್ಚಿರುತ್ತಿದ್ದವು. ಇದೀಗ ಲಾಕ್ಡೌನ್ ಮಾಡಿದ್ದರಿಂದ ಜೀವನ ದುಸ್ತರವಾಗಿದೆ.
ರಾಜ್ಯ ಸರ್ಕಾರ ಕೆಲ ವೃತ್ತಿಗಳಿಗೆ ಸಹಾಯಧನ ನೀಡುತ್ತಿದ್ದು,ನಮಗೂ ಸರ್ಕಾರ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.