ETV Bharat / state

‘ಫಜಲ್’ನಿಂದ ತಪ್ಪಲಿದೆ ಕಾರ್ ಪಾರ್ಕಿಂಗ್ ಫಜೀತಿ.. ಅವಳಿನಗರ ಮತ್ತಷ್ಟು ಸ್ಮಾರ್ಟ್ - ಹುಬ್ಬಳ್ಳಿ ಧಾರವಾಡದಲ್ಲಿ ಫಜಲ್ ಪಾರ್ಕಿಂಗ್ ವ್ಯವಸ್ಥೆ

ಹುಬ್ಬಳ್ಳಿಯ ಗಾಂಧಿ ಉದ್ಯಾನವನ (ಇಂದಿರಾ ಗಾಜಿನ‌‌ಮನೆ)ದಲ್ಲಿ ನಿರ್ಮಾಣವಾಗುತ್ತಿರುವ ಫಜಲ್ ಪಾರ್ಕಿಂಗ್​ನಿಂದಾಗಿ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್‌ಡಿಎಸ್‌ಸಿಎಲ್) ಅಭಿವೃದ್ಧಿಪಡಿಸಿದ ಈ ಸೌಲಭ್ಯ ಐದು ಹಂತಗಳನ್ನು ಹೊಂದಿದೆ. ಅಂದಾಜು 4.6 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಂಡಿರುವ ಫಜಲ್ ಪಾರ್ಕಿಂಗ್​​ನಲ್ಲಿ 37 ಕಾರುಗಳನ್ನು ನಿಲ್ಲಿಸಬಹುದಾಗಿದೆ.

ಸ್ಮಾರ್ಟ್
ಸ್ಮಾರ್ಟ್
author img

By

Published : Jan 6, 2021, 12:15 PM IST

Updated : Jan 6, 2021, 12:37 PM IST

ಹುಬ್ಬಳ್ಳಿ : ಹು-ಧಾ ಮಹಾನಗರ ಜನತೆಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ರಾಜ್ಯದಲ್ಲಿಯೇ ಮೊದಲ ಫಜಲ್ ಪಾರ್ಕಿಂಗ್ ಸೌಲಭ್ಯವು ಮುಂದಿನ ಕೆಲವು ದಿನಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸಲು ಸಿದ್ಧಗೊಳ್ಳುತ್ತಿದೆ.

ನಗರದ ಗಾಂಧಿ ಉದ್ಯಾನವನ (ಇಂದಿರಾ ಗಾಜಿನ‌‌ಮನೆ)ದಲ್ಲಿ ನಿರ್ಮಾಣವಾಗುತ್ತಿರುವ ಫಜಲ್ ಪಾರ್ಕಿಂಗ್​ನಿಂದಾಗಿ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್‌ಡಿಎಸ್‌ಸಿಎಲ್) ಅಭಿವೃದ್ಧಿಪಡಿಸಿದ ಈ ಸೌಲಭ್ಯ ಐದು ಹಂತಗಳನ್ನು ಹೊಂದಿದೆ. ಅಂದಾಜು 4.6 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಂಡಿರುವ ಫಜಲ್ ಪಾರ್ಕಿಂಗ್​​ನಲ್ಲಿ 37 ಕಾರುಗಳನ್ನು ನಿಲ್ಲಿಸಬಹುದಾಗಿದೆ.

‘ಫಜಲ್’ನಿಂದ ತಪ್ಪಲಿದೆ ಕಾರ್ ಪಾರ್ಕಿಂಗ್ ಫಜೀತಿ

ಫಜಲ್ ಪಾರ್ಕಿಂಗ್ ಅನ್ನು ಐಟಿ ಪಾರ್ಕ್‌ಗೆ ಸಮೀಪವಿರುವ ಸೌಲಭ್ಯಕ್ಕಾಗಿ ಆಯ್ಕೆ ಮಾಡಿದ್ದು, ಐಟಿ ಪಾರ್ಕ್ ಬಳಿ ವಾಹನ ಸಂಚಾರವನ್ನು ಸುಗಮಗೊಳಿಸಲು ನಾಗರಿಕ ಸಂಸ್ಥೆ ಉತ್ಸುಕವಾಗಿದೆ. ಫಜಲ್ ಪಾರ್ಕಿಂಗ್ ಸೌಲಭ್ಯದ ಪ್ರಮುಖ ಪ್ರಯೋಜನವೆಂದರೆ ಅಲ್ಲಿ ನಿಲುಗಡೆ ಮಾಡಬಹುದಾದ ವಾಹನಗಳ ಸಂಖ್ಯೆಯು ಅದೇ ಪ್ರದೇಶಕ್ಕೆ ಅನುಗುಣವಾಗಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿನ ಸೌಲಭ್ಯಗಳಿಂದ ಏಜೆನ್ಸಿಗೆ ಸ್ಫೂರ್ತಿ ಸಿಕ್ಕಿದ್ದು, ಹೊಸೂರ್ ಕ್ರಾಸ್, ಐಟಿ ಪಾರ್ಕ್ ಮತ್ತು ಎಂ.ಜಿ. ಪಾರ್ಕ್‌ನಲ್ಲಿ ಹ್ಯಾಪ್ ಯಾರ್ಡ್ ಪಾರ್ಕಿಂಗ್ ಸಮಸ್ಯೆಯಾಗಿತ್ತು. ಇದನ್ನು ಪರಿಹರಿಸಲು ಫಜಲ್ ಪಾರ್ಕಿಂಗ್ ಸೌಲಭ್ಯವು ಸಹಾಯ ಮಾಡುತ್ತದೆ.

ಟ್ರಯಲ್ ರನ್​ನಲ್ಲಿ ಲೋಡ್ ಮತ್ತು ಸಿಸ್ಟಮ್‌ನ ದಕ್ಷತೆಯನ್ನು ಪರೀಕ್ಷಿಸಲಾಗಿದ್ದು, ಜನವರಿ ಅಂತ್ಯದೊಳಗೆ ಫಜಲ್ ಪಾರ್ಕಿಂಗ್ ಕಾರ್ಯಾರಂಭ ಮಾಡಲಾಗುತ್ತದೆ. ಇಷ್ಟು ದಿನ ಕೆಲಸಕ್ಕೆ ಹೋಗುವಾಗ ಕಾರ್ ಪಾರ್ಕಿಂಗ್ ಮಾಡಲು ಜಾಗ ಹುಡುಕುತ್ತಿದ್ದ ಸಾರ್ವಜನಿಕರಿಗೆ ಸ್ಮಾರ್ಟ್ ಸಿಟಿ ಫಜಲ್ ಪಾರ್ಕಿಂಗ್ ಸೇವೆ ಜೊತೆಗೆ ಆಧುನಿಕತೆಯ ಟಚ್ ನೀಡಿದೆ.

Last Updated : Jan 6, 2021, 12:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.