ಧಾರವಾಡ: ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿರುವುದು ಅಕ್ಷಮ್ಯ ಅಪರಾಧ. ಅವಕಾಶ ಕೊಟ್ಟು ತಪ್ಪು ಮಾಡಿ, ಬಿಜೆಪಿ ಆಡಳಿತದಲ್ಲಿರುವ ಪಾಲಿಕೆ ದ್ರೋಹ ಮಾಡಿದೆ ಎಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರು ಅತ್ಯಂತ ನೀಚ ಕೆಲಸ ಮಾಡಿದ್ದಾರೆ. ಇದೇ ಬಿಜೆಪಿಯವರು ಟಿಪ್ಪು ಜಯಂತಿ ಬ್ಯಾನ್ ಮಾಡಿದ್ರು. ಈಗ ಬ್ಯಾನ್ ಮಾಡಿದವರೇ ಅನುಮತಿ ಕೊಡ್ತಾರೆಂದರೆ ಇವರ ನಿಲುವು ಹೇಗಿದೆ?. ಇವರಿಗೆ ತತ್ವ ಬೇಕಾಗಿಲ್ಲ ಅಧಿಕಾರ ಬೇಕು, ಓಲೈಕೆ ಬೇಕು. ಬಿಜೆಪಿಯವರ ನಿಲುವು ಬಟಾಬಯಲಾಗಿದೆ ಎಂದರು.
ಎಐಎಂಐಎಂ(ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೇಹದುಲ್ ಮುಸ್ಲಿಮೀನ್) ದೇಶದ್ರೋಹಿ ಪಕ್ಷ. ಇಂತಹ ಪಕ್ಷಕ್ಕೆ ಮನ್ನಣೆ ಕೊಡುತ್ತೀರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದೀರಿ ಎಂಬುದು ಗೊತ್ತಾಗುತ್ತಿದೆ. ಮತಾಂಧ, ದೇವಸ್ಥಾನ ಧ್ವಂಸ ಮಾಡಿದ ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ. ಟಿಪ್ಪು ಜಯಂತಿ ಮಾಡಲು ಅವಕಾಶ ಕೊಟ್ಟಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ಕ್ರಿಶ್ಚಿಯನ್, ಇಸ್ಲಾಂ ಬಗ್ಗೆ ಮಾತನಾಡಿದ್ದಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರ್ತಿದ್ರು: ಮುತಾಲಿಕ್ ಕಿಡಿ