ETV Bharat / state

ಪತಿಯ ಅಂತ್ಯ ಸಂಸ್ಕಾರಕ್ಕಾಗಿ ಪತ್ನಿಯ ಪರದಾಟ: ಕೇವಲ 20 ನಿಮಿಷದಲ್ಲಿ ಪಾಸ್​​ ಕೊಟ್ಟ ಅಧಿಕಾರಿಗಳು!

author img

By

Published : May 8, 2020, 8:57 PM IST

Updated : May 8, 2020, 9:31 PM IST

ಪತಿಯ ಅಂತ್ಯ ಸಂಸ್ಕಾರಕ್ಕಾಗಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳಲು ಪಾಸ್ ಇಲ್ಲದೆ ಪರಾದುತ್ತಿದ್ದ ಮಹಿಳೆಗೆ ಹುಬ್ಬಳ್ಳಿ ಅಧಿಕಾರಿಗಳು ಕೇವಲ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಕಾರ್ಯದಕ್ಷತೆ ಮೆರೆದಿದ್ದಾರೆ.

Pass arrangement in just 20 minutes for a woman
ಕೇವಲ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ

ಹುಬ್ಬಳ್ಳಿ: ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕ ಆಡಳಿತ ಕಾರ್ಯದಕ್ಷತೆ ಮೆರೆದಿದೆ.

ಅರವಿಂದ ನಗರದ ಯಶೋಧ ಲೋಕಾಪುರ ಎಂಬುವವರ ಪತಿ ಬಾಗಲಕೋಟೆಯ ನವನಗರದಲ್ಲಿ ತೀರಿಕೊಂಡಿದ್ದರು. ಆದ್ರೆ ಅವರು ಬಾಗಲಕೋಟೆಗೆ ತೆರಳಲು ಪಾಸ್ ಇಲ್ಲದೆ ತಮ್ಮ ಎರಡು ಚಿಕ್ಕ ಮಕ್ಕಳ ಜೊತೆಗೆ ತಹಶೀಲ್ದಾರ್​ ಕಚೇರಿಗೆ ಆಗಮಿಸಿ, ಅಂತ್ಯ ಸಂಸ್ಕಾರಕ್ಕೆ ತೆರಳಲು‌ ಪಾಸ್ ನೀಡುವಂತೆ ಮನವಿ ಮಾಡಿದ್ದರು.

ಮಹಿಳೆಯ ಪರಿಸ್ಥಿತಿ ಅರಿತ ಹುಬ್ಬಳ್ಳಿ ಶಹರ ತಹಶೀಲ್ದಾರ್​ ಶಶಿಧರ ಮಾಡ್ಯಾಳ, ಜಿಲ್ಲಾಡಳಿತದ ಸಹಾಯದೊಂದಿಗೆ ಕೇವಲ ‌20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಕಾರ್ಯದಕ್ಷತೆ ಮೆರೆದಿದ್ದಾರೆ.

ಪಾಸ್ ಪಡೆದ ಮಹಿಳೆ ಹಾಗೂ ಮಕ್ಕಳು ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಿ ಭಾರವಾದ ಮನಸ್ಸಿನಿಂದ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.‌

Last Updated : May 8, 2020, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.