ETV Bharat / state

ರಾತ್ರೋರಾತ್ರಿ ಜೋಡೆತ್ತು ಕದ್ದೊಯ್ದ ಕಳ್ಳರು: ದೂರು ದಾಖಲು - ಗಾಡಿ ಸ್ಪರ್ಧೆ

ತಡರಾತ್ರಿ 1 ಗಂಟೆಯವರೆಗೂ ಮಾಲೀಕರು ಹೊಲದ ಮನೆಯಲ್ಲಿದ್ದರು. ಎತ್ತುಗಳನ್ನು ಕಟ್ಟಿ ಮನೆಗೆ ಮರಳಿದ್ದರು. ಆದರೆ, ಬೆಳಗ್ಗೆ ವೇಳೆಗೆ ಎತ್ತುಗಳು ಕಳ್ಳತನವಾಗಿದ್ದು, ದೂರು ದಾಖಲಿಸಿದ್ದಾರೆ.

https://www.etvbharat.com/kannada/karnataka/state/dharwad/hubballi-cyclist-dies-of-heart-attack-in-competition/ka20210911141218669
ರಾತ್ರೋರಾತ್ರಿ ಜೋಡೆತ್ತುಗಳ ಕದ್ದೊಯ್ದ ಕಳ್ಳರು
author img

By

Published : Sep 11, 2021, 5:36 PM IST

ಧಾರವಾಡ: ಹೊಲದ ಮನೆಯಲ್ಲಿ ಕಟ್ಟಿದ್ದ ಜೋಡಿ ಎತ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ರಾಯಪ್ಪ ತಲವಾಯಿ ಹಾಗೂ ಸುರೇಶ್ ತಲವಾಯಿ ಎಂಬುವವರಿಗೆ ಸೇರಿದ ಎತ್ತುಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ಈ ಎತ್ತುಗಳು ಗ್ರಾಮೀಣ ಭಾಗದಲ್ಲಿ ಏರ್ಪಡಿಸುವ ಖಾಲಿ ಗಾಡಿ ಶರ್ತು (ಪಂದ್ಯ) ಓಡಿಸುವ ಎತ್ತುಗಳಾಗಿವೆ ಎಂದು ತಿಳಿದು ಬಂದಿದೆ.

ತಡರಾತ್ರಿ 1 ಗಂಟೆಯವರೆಗೂ ಮಾಲೀಕರು ಹೊಲದ ಮನೆಯಲ್ಲಿದ್ದರು. ಎತ್ತುಗಳನ್ನು ಕಟ್ಟಿ ಮನೆಗೆ ಮರಳಿದ್ದರು. ಆದರೆ, ಬೆಳಗ್ಗೆ ಎದ್ದು ನೋಡಿದಾಗ ಎತ್ತುಗಳು ಕಳ್ಳತನವಾಗಿರುವುದು ತಿಳಿದು ಬಂದಿದೆ.

ಎತ್ತುಗಳು ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಎತ್ತುಗಳ ಮಾಲೀಕರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓದಿ: ಸೈಕ್ಲಿಂಗ್ ಸ್ಪರ್ಧೆಯಲ್ಲೇ ಹೃದಯಾಘಾತ: ಹುಬ್ಬಳ್ಳಿಯ ಸೈಕ್ಲಿಸ್ಟ್ ವಿಧಿವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.