ETV Bharat / state

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬೆಳ್ಳಿ ಹಬ್ಬದ ಸಂಭ್ರಮ: ಮಾಸಿಕ ಪಾಸ್ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಣೆ - ದ್ವಿ ಮಾಸಿಕ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಪ್ರಯುಕ್ತ ತಿಂಗಳಿನ ಪಾಸ್​ಗೆ 2 ದಿನ, ಎರಡು ತಿಂಗಳಿನ ಪಾಸ್​ಗೆ 5 ದಿನ ಹಾಗೂ ಮೂರು ತಿಂಗಳಿನ ಪಾಸ್​ಗೆ 10 ದಿನಗಳ ಹೆಚ್ಚುವರಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾಹಿತಿ ನೀಡಿದ್ದಾರೆ.

Northwest Karnataka Road Transport Corporation Hubli
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ
author img

By

Published : May 25, 2023, 10:32 PM IST

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತನ್ನ ಸಂಸ್ಥಾಪನಾ ಬೆಳ್ಳಿಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಮಾಸಿಕ ಪಾಸುಗಳಿಗೆ ಹೆಚ್ಚುವರಿ ದಿನಗಳನ್ನು ಘೋಷಿಸಿ, ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ತಿಳಿಸಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್ ಕಾರ್ಯಾಚರಣೆ ವ್ಯಾಪ್ತಿ ಹೊಂದಿದೆ. 9 ಆಡಳಿತ ವಿಭಾಗಗಳು ಹಾಗೂ 55 ಡಿಪೋಗಳಿಂದ 4445 ಬಸ್​​ಗಳು 173 ಬಸ್ ನಿಲ್ದಾಣಗಳ ಮೂಲಕ ನಿತ್ಯ 15.04 ಲಕ್ಷ ಕಿ.ಮೀಟರ್ ಸಂಚರಿಸುತ್ತಿವೆ. ನಿತ್ಯ ವಾಯವ್ಯ ಸಾರಿಗೆ ಬಸ್​ಗಳಲ್ಲಿ 16 ರಿಂದ 17 ಲಕ್ಷ ಜನರು ನಿತ್ಯ ಪ್ರಯಾಣ ಮಾಡುವರು.

ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಇದು ವರೆಗೆ ಮಾಸಿಕ ಪಾಸುಗಳು ಮಾತ್ರ ಲಭ್ಯವಿರುತ್ತವೆ. ಬಸ್ ಪಾಸ್ ಪಡೆಯುವ ಗ್ರಾಹಕರು ಪ್ರತಿ ತಿಂಗಳು ಬಸ್ ನಿಲ್ದಾಣಕ್ಕೆ ಬಂದು ಹೊಸ್ ಪಾಸ್ ಪಡೆಯಬೇಕಿತ್ತು. ಈ ತೊಂದರೆ ತಪ್ಪಿಸಲು ಸಂಸ್ಥೆಯ ಸಂಸ್ಥಾಪನಾ ರಜತ ಮಹೋತ್ಸವದ ಕೊಡುಗೆಯಾಗಿ ದ್ವಿ ಮಾಸಿಕ ಹಾಗೂ ತ್ರೈ ಮಾಸಿಕ ಪಾಸುಗಳನ್ನು ಪರಿಚಯಿಸಿದೆ.

ಜೊತೆಗೆ ಒಂದು ತಿಂಗಳ ಪಾಸ್​ಗೆ 2 ದಿನ, ಎರಡು ತಿಂಗಳ ಪಾಸ್​ಗೆ 5 ದಿನ ಹಾಗೂ ಮೂರು ತಿಂಗಳ ಪಾಸ್​ಗೆ 10 ದಿನ ಗಳ ಹೆಚ್ಚುವರಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಬಸ್ ಪಾಸ್ ಗ್ರಾಹಕರು ದಿನಕ್ಕೆ ಎಷ್ಟು ಸಲ ಬೇಕಾದರೂ ಪ್ರಯಾಣ ಮಾಡಬಹುದು. ಇದರಿಂದ ಬಸ್ ಪಾಸ್ ಗ್ರಾಹಕರಿಗೆ ಸಮಯ ಹಾಗೂ ಬಸ್ ಟಿಕೆಟ್ ಹಣದಲ್ಲಿ ಬಹಳಷ್ಟು ಉಳಿತಾಯವಾಗಲಿದೆ.

ಸಾರ್ವಜನಿಕರು ಒಂದು ತಿಂಗಳ ಪಾಸ್ ಪಡೆದರೆ ಸರಾಸರಿ ಇಪತ್ತು ದಿನಗಳ ಬಸ್ ಟಿಕೆಟ್ ಹಣದಲ್ಲಿ 32ದಿನಗಳ ಅವಧಿಗೆ ಪ್ರಯಾಣ ಮಾಡಬಹುದು. ದ್ವಿ ಮಾಸಿಕ ಪಾಸ್ ಪಡೆದರೆ 40 ದಿನಗಳ ಬಸ್ ಟಿಕೆಟ್ ಹಣದಲ್ಲಿ 65 ದಿನ ಪ್ರಯಾಣ ಮಾಡಬಹುದಾಗಿದೆ. ತ್ರೈ ಮಾಸಿಕ ಪಾಸ್ ಪಡೆದರೆ 60 ದಿನಗಳ ಬಸ್ ಟಿಕೆಟ್ ಹಣದಲ್ಲಿ 100 ದಿನಗಳ ಅವಧಿಗೆ ಪ್ರಯಾಣ ಮಾಡಬಹುದಾಗಿದೆ.ಹೆಚ್ಚಿನ ಮಾಹಿತಿಗೆ ಹತ್ತಿರದ ಬಸ್ ನಿಲ್ದಾಣವನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಬೆಳಗಾವಿ, ಶಿರಸಿ,ಬಾಗಲಕೋಟೆ, ಚಿಕ್ಕೋಡಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗ ದೊಡ್ಡ ನಿಗಮ ಎನ್​ಡಬ್ಲುಕೆಆರ್​ಟಿಸಿ ಆಗಿದ್ದು, ಇದು ಬರೋಬ್ಬರಿ 22,500ಕ್ಕೂ ಹೆಚ್ಚು ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಮೋಟಾರು ವಾಹನಗಳ ನಿಯಮ 1989 ರಡಿ ಭಾರತ ಸರ್ಕಾರವು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅಥವಾ PUC ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ್ದೂ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ಹೊಂದಿದೆ. ಆದರೆ, ಎಲ್ಲಡೆ ಬರೀ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ವಾಹನಗಳಿಗೆ ಮಾತ್ರ ಪಿಯುಸಿ ಟೆಸ್ಟ್ ನಡೆಯುತ್ತಿತ್ತು. ಆದರೆ, ವಾಯವ್ಯ ಸಾರಿಗೆ ಸಂಸ್ಥೆಯೂ ಇದೀಗ ಖಾಸಗಿ ವಾಹನಗಳ ಪಿಯುಸಿ ಟೆಸ್ಟಿಂಗ್‌ಗೆ ಮುಂದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಖಾಸಗಿ ವಾಹನಗಳಿಗೆ ಪಿಯುಸಿ ಟೆಸ್ಟಿಂಗ್‌ ಹುಬ್ಬಳ್ಳಿಯಲ್ಲಿ ಆರಂಭಿಸಿದೆ.

ಇದನ್ನೂಓದಿ:ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ಮುಂದಿನ ಐದು ದಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.