ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆ. ಹೀಗಾಗಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿ ಸಿಎಂ ಬದಲಿಸಿದರೆ ಉತ್ತರ ಕರ್ನಾಟಕದವರೇ ಮತ್ತೆ ಸಿಎಂ ಆಗಲಿ ಎಂದು ಜೆಡಿಎಸ್ ನಾಯಕ ಎನ್.ಹೆಚ್.ಕೋನರೆಡ್ಡಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡೋದು ಅವರ ಆಂತರಿಕ ವಿಚಾರ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಸಿಎಂ ಅವರಾಗ್ತಾರೆ, ಇವ್ರಾಗ್ತಾರೆ ಅಂತಾ ಚರ್ಚೆಯಾಗುತ್ತಿದೆ ಎಂದರು.
'ಬಸವರಾಜ್ ಹೊರಟ್ಟಿ ಪಕ್ಷಾತೀತ ನಾಯಕ'
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೇಶವ ಕುಂಜಕ್ಕೆ (ಆರ್‌ಎಸ್‌ಎಸ್ ಕಚೇರಿ) ಭೇಟಿ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಆದ್ರೆ ಕೇಶವ ಕುಂಜಕ್ಕೆ ಭೇಟಿ ನೀಡುವುದಿಲ್ಲ. ಬಸವರಾಜ ಹೊರಟ್ಟಿಯವರು ನಮ್ಮ ನಾಯಕರು, ಅವರು ಈಗ ಪಕ್ಷಾತೀತ. ಅವರು ಈಗ ಸಭಾಪತಿ, ಪಕ್ಷದ ವಿಚಾರ ಬರುವುದಿಲ್ಲ. ಡಿಸಿಎಂ ಅಶ್ವತ್ಥ ನಾರಾಯಣ ಅವರ ಜೊತೆಗಿನ ಆತ್ಮೀಯತೆಯಿಂದ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ. ಅವರು ಜೆಡಿಎಸ್‌ನಲ್ಲಿ ಇರುತ್ತಾರೆ ಎಂದರು.
'ಮುಂದಿನ ಬಾರಿ ಜೆಡಿಎಸ್‌ಗೆ ಅಧಿಕಾರ ಪಕ್ಕಾ'
ಮುಂದಿನ ವಿಧಾನಸಭೆ ಚುಣಾವಣೆಗೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಎನ್.ಹೆಚ್.ಕೋನರೆಡ್ಡಿ ಭವಿಷ್ಯ ನುಡಿದರು. ಮುಂದಿನ ಚುಣಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ 100 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. ಜನವರಿ ತಿಂಗಳ ಪ್ರಾರಂಭದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ?.. ಬಿಜೆಪಿ ರಾಜ್ಯಾಧ್ಯಕ್ಷರ ಪರ ಬ್ಯಾಟ್ ಬೀಸಿದ ಯತ್ನಾಳ!