ETV Bharat / state

ಹುಬ್ಬಳ್ಳಿಯಲ್ಲಿ ಕಟ್ಟುನಿಟ್ಟಿನಿಂದ ಹೊಸ ವರ್ಷಾಚರಣೆಗೆ ಕಮಿಷನರ್ ಲಾಬೂರಾಮ್ ಸೂಚನೆ - etv bharat kannada

ವಾಣಿಜ್ಯ ನಗರಿಯಲ್ಲಿ ಕೇಕ್, ಮದ್ಯಕ್ಕೆ ಹೆಚ್ಚಿದ ಬೇಡಿಕೆ- ನೂತನ ವರ್ಷ ಸ್ವಾಗತಿಸಲು ಜನತೆ ಸಿದ್ಧ- ನಿಯಮ ಉಲ್ಲಂಘನೆ ಮಾಡದಂತೆ ಕಮಿಷನರ್ ಎಚ್ಚರಿಕೆ

new year prepration
ಕಮಿಷನರ್ ಲಾಬೂರಾಮ್
author img

By

Published : Dec 31, 2022, 5:58 PM IST

Updated : Dec 31, 2022, 10:54 PM IST

ಹುಬ್ಬಳ್ಳಿಯಲ್ಲಿ ಕಟ್ಟುನಿಟ್ಟಿನಿಂದ ಹೊಸ ವರ್ಷಾಚರಣೆಗೆ ಕಮಿಷನರ್ ಲಾಬೂರಾಮ್ ಸೂಚನೆ

ಹುಬ್ಬಳ್ಳಿ: ಹೊಸ ವರ್ಷಾಚರಣೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಜಿಲ್ಲೆಯ ಮಹಾನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ರಾತ್ರಿ 9 ಗಂಟೆಯಿಂದ ವಿಶೇಷ ತಂಡಗಳು ಜಿಲ್ಲೆಯಾದ್ಯಂತ ಗಸ್ತು ನಡೆಸಲಿವೆ ಎಂದು ಹುಬ್ಬಳ್ಳಿ -ಧಾರವಾಡ ಕಮಿಷನರ್ ಲಾಬೂರಾಮ್ ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು 7 ಕೆಎಸ್​ಆರ್​ಪಿ ಮತ್ತು 10 ಸಿಆರ್​ಪಿ ತುಕಡಿಗಳ ನೇಮಕ ಮಾಡಲಾಗಿದೆ. ಅವಳಿ ನಗರದಾದ್ಯಂತ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಬೈಕ್ ವ್ಹೀಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್ ತಡೆಯುವ ನಿಟ್ಟಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಿಶೇಷ ತಂಡಗಳ ನೇಮಕ ಮಾಡಲಾಗಿದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ರೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪಂಚತಾರಾ ಹೋಟೆಲ್, ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್​ಗಳಲ್ಲಿ 1 ಗಂಟೆಯ ತನಕ ಮಾತ್ರ ಹೊಸ ವರ್ಷದ ಆಚರಣೆಗೆ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡದಂತೆ ಈಗಾಗಲೇ ಆಯೋಜಕರ ಸಭೆ ನಡೆಸಲಾಗಿದೆ. ಅವಳಿ ನಗರ ಸೂಕ್ಷ್ಮ ಪ್ರದೇಶವಾದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಕೇಕ್‌, ಮದ್ಯಕ್ಕೆ ಹೆಚ್ಚಿದ ಬೇಡಿಕೆ: ಹಲವಾರು ಸಿಹಿ ಹಾಗೂ ಕಹಿ ಘಟನೆಗಳ ನಡುವೆ 2022ನೇ ವರ್ಷಕ್ಕೆ ವಿದಾಯ ಹೇಳಿ, ನೂತನ ವರ್ಷ 2023 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಕೇಕ್ ಮತ್ತು ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ.

ಕೋವಿಡ್​ ಉಪತಳಿ ಬಿಎಫ್. 7ರ ಆತಂಕದ ನಡುವೆಯೂ ಹೊಸ ವರ್ಷಾಚರಣೆಯನ್ನು ಆಚರಿಸಲು ಜನರು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕೊರೊನಾ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ನ್ಯೂ ಇಯರ್​ ಆಚರಣೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಪಂಚತಾರಾ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಸಂಘ– ಸಂಸ್ಥೆಗಳು ಹೊಸ ವರ್ಷವನ್ನು ಸ್ವಾಗತಿಸಲು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಜ್ಜಾಗಿವೆ. ಇನ್ನು, ಇದೇ ನೆಪದಲ್ಲಿ ಡಿಜೆ, ಸಂಗೀತ, ನೃತ್ಯ, ಮೋಜು, ಮಸ್ತಿಗೆ ಯುವಜನರು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಸಿದ್ಧತೆ: ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್ ಟೆರೇಸ್​ಗಳಿಗೆ ನೋ ಎಂಟ್ರಿ

ವರ್ಷಾಂತ್ಯದ ಸಂಭ್ರಮಾಚರಣೆಗಾಗಿ ಇಂದು ಸಂಜೆ ಡಿಜೆ ಸಂಗೀತ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಕೋವಿಡ್‌ನಿಂದಾಗಿ ಮದ್ಯ ಮಾರಾಟ ಕುಂಠಿತವಾಗಿತ್ತು. ಆದರೂ ಕೂಡ ಹುಬ್ಬಳ್ಳಿಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿತ್ತು. ಅದು ಈ ಬಾರಿ ದುಪ್ಪಟ್ಟಾಗುವ ಸಾಧ್ಯತೆ ಇದೆ.

2021-22ರ ಸಂಭ್ರಮಕ್ಕೆ ಅಡ್ಡಿಯಾಗಿದ್ದ ಕೊರೊನಾ: 2021 ಮತ್ತು 2022 ರ ಹೊಸ ವರ್ಷದ ಸಂಭ್ರಮಕ್ಕೆ ಕೋವಿಡ್​ ಅಡ್ಡಿಯಾಗಿತ್ತು. ಯಾವುದೇ ಮೋಜು ಮಸ್ತಿ ಇಲ್ಲದೆ ಕಟ್ಟುನಿಟ್ಟಿನ ಕ್ರಮದೊಂದಿಗೆ 2022 ಅನ್ನು ಸ್ವಾಗತಿಸಲಾಗಿತ್ತು. ಅಲ್ಲದೇ ಹೋಟೆಲ್​ ರೆಸ್ಟೋರೆಂಟ್​ಗಳಲ್ಲಿ ಯಾವುದೇ ಜನಸಂದಣಿ ಆಗದಂತೆ ತಡೆಯಲಾಗಿತ್ತು. ಆದರೆ 2023 ರ ನ್ಯೂ ಇಯರ್​ ಸೆಲೆಬ್ರೆಶನ್​ ಮಾಡಲು ಸರ್ಕಾರ ಅವಕಾಶ ನೀಡಿದೆ ಎಂದು ಧಾರುವಾಲಾ ಮ್ಯಾನೇಜರ್​ ಅನೀಲ್​ ಮಹೇಂದ್ರಕರ್​ ಹೇಳಿದರು.

ಮತ್ತೊಂದೆಡೆ ಡೆನಿಸನ್ಸ್​ ಹೋಟೆಲ್​ ಮ್ಯಾನೇಜರ್​ ವಿವೇಕ್​ ಮಾತನಾಡಿ, ಜಿಲ್ಲೆಯ ಜನರ ಒತ್ತಾಸೆಯ ಮೇರೆಗೆ ಈ ಬಾರಿ ಹೋಟೆಲ್​ಗಳಲ್ಲಿ ಮನರಂಜನೆಗೆಂದು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಟೇಬಲ್​ ಹಾಕಲಾಗಿದ್ದು, 35 ರಿಂದ 40 ತರಹದ ವೆಜ್ ಹಾಗೂ ನಾನ್ ವೆಜ್ ಆಹಾರ ಪದಾರ್ಥಗಳನ್ನು ಸಿದ್ಧವಿಟ್ಟುಕೊಳ್ಳಲಾಗಿದೆ.

ಕಳೆದೆರಡು ವರ್ಷಗಳಲ್ಲಿ ಹೊಸ ವರ್ಷಕ್ಕೆ ಕೋವಿಡ್​ ಕಾರಣದಿಂದ ಮದ್ಯ ಮಾರಾಟ ಕಡಿಮೆ ಇತ್ತು. ಆದರೆ ಈ ವರ್ಷ ಸರ್ಕಾರ ಇದಕ್ಕೆ ಯಾವುದೇ ರೀತಿಯಲ್ಲಿ ಕಡಿವಾಣ ಹಾಕಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಮದ್ಯ ಮಾರಾಟವಾಗುವ ನಿರೀಕ್ಷೆ ಮದ್ಯದಂಗಡಿ ಮಾಲೀಕರಿಗಿದೆ. ಅಲ್ಲದೇ ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮದ್ಯ ಖರೀದಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಅಧಿಕಾರಿಗಳಿಗೆ ನ್ಯೂ ಇಯರ್ ಗಿಫ್ಟ್.. 42ಐಎಎಸ್​, 27 ಐಎಫ್​ಎಸ್ ಅಧಿಕಾರಿಗಳಿಗೆ ಪದೋನ್ನತಿ ಭಾಗ್ಯ

Last Updated : Dec 31, 2022, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.