ಧಾರವಾಡ: ಎನ್ಡಿಆರ್ಎಫ್ ತಂಡವು ಕಟ್ಟಡ ದುರಂತ ನಡೆದಾಗ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಅಣಕು ಪ್ರದರ್ಶನ ನಡೆಯಿತು.
ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಕಟ್ಟಡ ದುರಂತದ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಬಂದು ವೀಕ್ಷಿಸಿದರು.
ಧಾರವಾಡದಲ್ಲಿ ಕಳೆದ ಬಾರಿ ಸಂಭವಿಸಿದ ದುರಂತ ಮುಂದೆಂದೂ ಆಗಬಾರದು, ಹಾಗೇನಾದರೂ ಆದಲ್ಲಿ ಯಾವ ರೀತಿ ಬೇಗ ಪ್ರತಿಕ್ರಿಯಿಸಬೇಕು ಎಂದು ಎನ್ಡಿಆರ್ಎಫ್ (NDRF) ತಂಡದವರು ಮನವರಿಕೆ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ.
ಇನ್ನೂ ಈ ಅಣಕು ಪ್ರದರ್ಶನದ ಬಗ್ಗೆ ಮಾಹಿತಿಯನ್ನು ಎನ್ಡಿಆರ್ಎಫ್ ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ ನೀಡಿದರು. ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎನ್ಡಿಆರ್ಎಫ್ ತಂಡದವರು ನಡೆಸಿದ ರಕ್ಷಣಾ ಕಾರ್ಯವನ್ನು ಧಾರವಾಡದ ಜನತೆ ನೋಡಿ ಕಣ್ತುಂಬಿಕೊಂಡರು.