ಹುಬ್ಬಳ್ಳಿ : ಜಗತ್ತಿನ ಏಳು ಎತ್ತರದ ಪರ್ವತಗಳ ಪೈಕಿ ಕಿಲಿಮಂಜಾರೋ ಪರ್ವತ ಏರಿದ ಮೊದಲ ಕನ್ನಡತಿ ಹುಬ್ಬಳ್ಳಿಯ ನಂದಿತಾ ನಾಗನಗೌಡ ಪ್ರತಿಷ್ಟಿತ 'ರಾಜ್ಯೋತ್ಸವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಪರ್ವತಾರೋಹಿ ನಂದಿತಾ 2016 ಸೆಪ್ಟೆಂಬರ್ 20 ರಂದು ದಕ್ಷಿಣ ಆಫ್ರಿಕಾದ ಕಿಲಿಮಂಜಾರೋ ಏರಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದರು. ಹೀಗಾಗಿ ಅವರ ಸಾಧನೆ ಗುರುತಿಸಿರುವ ಕರ್ನಾಟಕ ಸರ್ಕಾರ ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜಗತ್ತಿನ ಏಳು ಖಂಡಗಳ, ಏಳು ಎತ್ತರದ ಪರ್ವತ ಏರುವ ಕನಸು ಕಂಡಿದ್ದ ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ನಂದಿತಾ ಪರ್ವತಾರೋಹಣ ಆಸಕ್ತಿಗೆ ಮನೆಯಲ್ಲಿ ತೀವ್ರ ವಿರೋಧವಿತ್ತು. ಆದರೆ ಛಲ ಬಿಡದೆ ಅಂದುಕೊಂಡಿದ್ದನ್ನು ಸಾಧಿಸಿ ಇತರ ಮಹಿಳೆಯರಿಗೆ ಈಕೆ ಮಾದರಿಯಾಗಿದ್ದಾರೆ.
2011ರಲ್ಲಿ ಹುಬ್ಬಳ್ಳಿಯ ಬಿವಿಬಿಯಲ್ಲಿ ಇಂಜಿನಿಯರಿಂಗ್ ಮುಗಿಸಿರುವ ನಂದಿತಾ ಅವರು ಸದ್ಯ ಇಂಗ್ಲೆಂಡ್‌ನಲ್ಲಿ ಎಂಬಿಎ ಪದವಿ ಪಡೆದು ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದಾರೆ.
2016ರಲ್ಲಿ ಮೌಂಟ್ ಎವರೆಸ್ಟ್, ಕಳೆದ ಜೂನ್ನಲ್ಲಿ ಆಸ್ಟ್ರೇಲಿಯಾದ ಕಾರ್ ಸ್ಟೆಂಝ್ ಪಿರಾಮಿಡ್ ಶಿಖರ ಏರಿದ್ದರು. ಸದ್ಯ 2016 ಸೆಪ್ಟೆಂಬರ್ 20ರಂದು ದಕ್ಷಿಣ ಆಫ್ರಿಕಾದಲ್ಲಿರುವ ಕಿಲಿಮಂಜಾರೋ ಪರ್ವತ ಏರಿದ ಸಾಧಕಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.