ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಮತ ಕೇಂದ್ರದಲ್ಲಿ ಸುಮಾರು 400ಕ್ಕೂ ಅಧಿಕ ಮತಗಳು ಡಿಲೀಟ್ ಆಗಿರುವ ಘಟನೆ ನಡೆದಿದೆ. ಇಲ್ಲಿನ ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿವೆ. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ಮತ ಚಲಾಯಿಸಲು ಬಂದ ಸಾರ್ವಜನಿಕರು ಚುನಾವಣಾ ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಮತದಾರ ಪಟ್ಟಿಯಿಂದ ಕೆಲವರ ಹೆಸರು ಕೈ ಬಿಟ್ಟ ವಿಚಾರಕ್ಕೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಬಗ್ಗೆ ಕೂಡ ನಮಗೆ ದೂರು ಬಂದಿದೆ. ಕಳೆದ ಆರು ತಿಂಗಳ ಹಿಂದೆ ಆಗಿದ್ದು ಮತದಾರರ ಪಟ್ಟಿ ಇಲ್ಲದೇ ಇರೋರ ಬಗ್ಗೆ ಮಾಹಿತಿ ತಿಳಿಸಲು ಹೇಳಲಾಗಿತ್ತು. ಕಳೆದ 6 ತಿಂಗಳಲ್ಲಿ 40 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೆಲವೊಬ್ಬರು ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ. ಕೆಲವರು ಬೇರೆ ಕಡೆ ಹೆಸರು ಇರುವುದರಿಂದ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಬಾರಿ ಚುನಾವಣೆ ಮತ ಹಾಕಲು ಅವರಿಗೆ ಅವಕಾಶ ಇಲ್ಲ, ಫಾರಂ ಸಿಕ್ಸ್ ಅಪ್ಲೈ ಮಾಡಿದ್ರೆ ಸೇರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರದ ಮಸಬಿನಾಳದಲ್ಲಿ ಮತಯಂತ್ರ ಪುಡಿ ಪುಡಿ; ಕೋಲಾರದಲ್ಲಿ ಪಿಎಸ್ಐ ಜೀಪ್‌ಗೆ ಮುತ್ತಿಗೆ