ಧಾರವಾಡ : ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಸಿಎಂ ಅವರಿಗೆ ಎಲ್ಲವೂ ಮಾಹಿತಿ ಇದೆ. ನಾವು ತಡೆ ಹಿಡಿಯಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಸಚಿವ ಲಾಡ್ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ನೀರು ಬಿಡಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತೆ. ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದು ಮನವಿ ಮಾಡಿಕೊಂಡರು. ನಾಳೆ ಜನತಾ ದರ್ಶನ ಹಿನ್ನೆಲೆಯಲ್ಲಿ ಸಿಎಂ ಆದೇಶದ ಮೇರೆಗೆ ಜನತಾ ದರ್ಶನವನ್ನು ಎಲ್ಲ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ ಎಂದರು.
ಲೋಕಸಭಾ ಚುನಾವಣೆ ವಿಚಾರ ಕುರಿತಂತೆ ಮಾತನಾಡಿದ ಸಚಿವರು, ಮೋದಿ ಅವರು 10 ವರ್ಷದಲ್ಲಿ ದೇಶವನ್ನು ದಿವಾಳಿ ಮಾಡಿದ್ದಾರೆ. ಅದೇ ಬೇಸ್ನಲ್ಲಿ ನಾವು ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. 10 ವರ್ಷದಿಂದ ಒಂದೇ ಒಂದು ಯೋಜನೆ ಇಲ್ಲ. ಆ ಬಗ್ಗೆ ಇವತ್ತಿಗೂ ಏನೂ ಮಾತನಾಡಲ್ಲ. ಅದರ ಬದಲಾಗಿ ಮೊದಲು 5 ಕೋಟಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದರು. ಈಗ 20 ಕೋಟಿ ಜನ ಇಂಟರ್ನೆಟ್ ಬಳಕೆ ಮಾಡುತ್ತಾರೆ. ಮೊದಲು 6 ಕೋಟಿ ಮೊಬೈಲ್ ಬಳಕೆ ಮಾಡುತ್ತಿದ್ದರು. ಈಗ 40 ಕೋಟಿ ಮೊಬೈಲ್ ಬಳಕೆ ಮಾಡುತ್ತಾರೆ ಅಂತಾರೆ. ಆದ್ರೆ ಇವೆಲ್ಲ ಸರ್ಕಾರದ ಕಾರ್ಯಕ್ರಮಗಳು ಅಲ್ಲ ಎಂದು ತಿಳಿಸಿದರು.
10 ವರ್ಷದಲ್ಲಿ ಮಾಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ಇವತ್ತು ಕೇಂದ್ರ ಸರ್ಕಾರ ಬಂದು ಕಾರ್ಯಕ್ರಮಗಳ ಬಗ್ಗೆ ಹೇಳಬೇಕು. ಯಾರೆ ಪ್ರಧಾನಿ ಆದ್ರೂ ಜಿಡಿಪಿ ಹೆಚ್ಚು ಆಗೇ ಆಗುತ್ತೆ. ಅವರಿಗೆ ಅನೂಕೂಲವಾದುದನ್ನು ಮಾತ್ರ ಮಾತನಾಡುತ್ತಾರೆ. ಪ್ರಧಾನಿ ಮೋದಿ 10 ವರ್ಷದಲ್ಲಿ ಕೇವಲ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದಾರೆ. ಕಳೆದ 10 ವರ್ಷದಲ್ಲಿ ಸುಮಾರು 20 ಕೋಟಿ ಜನ ಬಿಪಿಎಲ್ ಕಾರ್ಡ್ನಲ್ಲಿ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಸಣ್ಣ ಕೈಗಾರಿಕೆಗಳ ಕಡೆ ಗಮನ ಹರಿಸಿದ್ದಾರೆ. ನಮ್ಮ ವಸ್ತುಗಳನ್ನು ಬೇರೆ ಯಾವುದೇ ಅಂಗಡಿಯಲ್ಲಿಡೋದು, ಅವುಗಳನ್ನು ಮತ್ತೆ ನಮಗೆ ಹೆಚ್ಚಳವಾಗಿ ಅವರು ಮಾರಾಟ ಮಾಡುತ್ತಾರೆ ಎಂದು ಸಚಿವ ಲಾಡ್ ಹೇಳಿದ್ರು.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ನಮಗೆ ಏನೂ ಎಫೆಕ್ಟ್ ಆಗಲ್ಲ, ಮೋದಿ ವಿರುದ್ಧ ಜನ ಮತ ಹಾಕೆ ಹಾಕ್ತಾರೆ. ಈ ಬಾರಿ ಕಾಂಗ್ರೆಸ್ ಪಕ್ಷ 100% ಅಧಿಕಾರಕ್ಕೆ ಬರುತ್ತೆ. ನಮ್ಮ ಮೇಲಿನ ಆಡಳಿತ ವಿರೋಧಿ ಅಲೇ ಇತ್ತು. ಆದರೆ, ಈ ಬಾರಿ ಬಿಜೆಪಿ ಮೇಲೆ ಇದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೆ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ ವಿಚಾರ ಮಾತನಾಡಿ, ನನಗೂ ಬೀದರ್ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ. ಧಾರವಾಡ ಜಿಲ್ಲೆಗೆ ಹೆಬ್ಬಾಳ್ಕರ್ ಆಯ್ಕೆ ಆಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಲಿಂಗಾಯತ ಲೀಡರ್ ಎಂದು ಹೇಳುವ ಅವಶ್ಯಕತೆ ಇಲ್ಲ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಳವಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಿರಬಹುದು ಎಂದರು.
ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರುಗಳ ಜೊತೆ ಸಭೆ ಮಾಡಲಿದ್ದಾರೆ. ಸಭೆ ಬಳಿಕ ಹೆಸರು ಪ್ರಸ್ತಾಪ ಮಾಡಬೇಕು. ಶಿವಲೀಲಾ ಕುಲಕರ್ಣಿ, ವಿಜಯ ಕುಲಕರ್ಣಿ, ವಿನೋದ ಅಸೋಟಿ, ಜಗದೀಶ್ ಶೆಟ್ಟರ್ ಹೆಸರು ಪ್ರಸ್ತಾಪ ವಿಚಾರ ಸದ್ಯ ಹೆಬ್ಬಾಳ್ಕರ್ಜಿಲ್ಲೆಗೆ ಬಂದು ಸಭೆ ಮಾಡುತ್ತಾರೆ. ಸಭೆ ಬಳಿಕ ಒಂದು ಹೆಸರನ್ನು ಹೈಕಮಾಂಡ್ಗೆ ಕೊಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಚಿಂತನೆ: ಕಾರ್ಮಿಕ ಸಚಿವ ಸಂತೋಷ್ ಲಾಡ್