ETV Bharat / state

ಮಾಜಿ ಸಭಾಪತಿಗಳಿಂದ ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನ

author img

By

Published : Dec 6, 2019, 5:35 PM IST

ಧಾರವಾಡದ ಪ್ರಜೆಂಟೇಷನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನದ ಚಳಿಗಾಲ ಅಧಿವೇಶನದಲ್ಲಿ ವಿಧಾನ ಪರಿಷತ್‍ನ ಮಾಜಿ ಸಭಾಪತಿ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಭಾಗವಹಿಸಿ ಮಾದರಿ ಅಧಿವೇಶನ ನಡೆಸಿದರು.

Basavaraj horatti
ಬಸವರಾಜ ಹೊರಟ್ಟಿ

ಧಾರವಾಡ: ವಿಧಾನ ಪರಿಷತ್‍ನ ಮಾಜಿ ಸಭಾಪತಿ ಬಸವರಾಜ್​ ಹೊರಟ್ಟಿ ಅವರು ನಗರದ ಪ್ರಜೆಂಟೇಷನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸದೀಯ ಕಾರ್ಯ ಕಲಾಪಗಳ ಅಣುಕು ಪ್ರದರ್ಶನದ ಚಳಿಗಾಲ ಅಧಿವೇಶನವನ್ನು ಒಂದು ಗಂಟೆಗೂ ಹೆಚ್ಚು ಕಾಲ ಸ್ವತಃ ತಾವೇ ನಿರ್ವಹಿಸಿ, ಸರಳತೆ ಮೆರೆದರು.

ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನ

ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಸಂಪ್ರದಾಯದಂತೆ ಉದ್ಘಾಟನಾ ಭಾಷಣ ಮಾಡದೇ ಸಭಾಪತಿಗಳ ಪೀಠದಲ್ಲಿ ಆಸೀನರಾಗಿ, ಸದನದ ಎಲ್ಲ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರಿಗೆ ಪ್ರಶ್ನೋತ್ತರ ಪ್ರಕ್ರಿಯೆ ಮತ್ತು ಶಾಸನಸಭೆಗಳಲ್ಲಿ ನಿರ್ವಹಿಸುವ ನಿಯಮಗಳ ಕುರಿತು ತರಬೇತಿ ನೀಡಿದ್ರು.

ಅವರು ನಿರ್ವಹಿಸಿದ ಕಾರ್ಯಕಲಾಪಗಳಲ್ಲಿ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ರಹಿತ ಪ್ರಶ್ನೆ, ಝೀರೊ ಅವರ್ ಕಲಾಪಗಳನ್ನು ನಡೆಸಲಾಯಿತು. ಮಹಿಳೆಯರಿಗೆ ಅನಗತ್ಯವಾಗಿ ಸಿಜೇರಿಯನ್​ ಮೂಲಕ ಹೆರಿಗೆ ಮಾಡಿಸುವುದು, ರಸ್ತೆ ದುರಸ್ತಿ, ವೈದ್ಯಕೀಯ ಕಾಲೇಜು ಮಂಜೂರಾತಿ, ವಿದ್ಯಾರ್ಥಿ ವೇತನದ ವಿಳಂಬ, ಮೀಸಲಾತಿ ಮುಂದುವರಿಕೆ, ಕಾರ್ಮಿಕರ ರಕ್ಷಣೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಮುಂತಾದವುಗಳ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಿತು.

ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಏಳು ಶೈಕ್ಷಣಿಕ ತಾಲೂಕಿನ 70 ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಣುಕು ಸದನದಲ್ಲಿ ಭಾಗವಹಿಸಿದ್ದರು.

Intro:ಧಾರವಾಡ: ಕರ್ನಾಟಕ ವಿಧಾನ ಪರಿಷತ್‍ನ ಮಾಜಿ ಸಭಾಪತಿಗಳು ಆಗಿರುವ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಅವರು ಧಾರವಾಡದ ಪ್ರಜೆಂಟೇಷನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನದ ಚಳಿಗಾಲ ಅಧೀವೇಶನವನ್ನು ಒಂದು ಗಂಟೆಗೂ ಹೆಚ್ಚು ಕಾಲ ಸ್ವತಃ ತಾವೇ ನಿರ್ವಹಿಸಿ, ಸರಳತೆ ಮೆರೆದರು.

ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಸಂಪ್ರದಾಯದಂತೆ ಉದ್ಘಾಟನಾ ಭಾಷಣ ಮಾಡದೇ ಸಭಾಪತಿಗಳ ಪೀಠದಲ್ಲಿ ಆಸನರಾಗಿ, ಸದನದ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ಮತ್ತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದನದ ಸದಸ್ಯರಿಗೆ ಪ್ರಶ್ನೆ ಕೇಳುವ ರೀತಿ, ಉತ್ತರಿಸುವ ರೀತಿ ಮತ್ತು ಶಾಸನಸಭೆಗಳಲ್ಲಿ ನಿರ್ವಹಿಸುವ ನಿಯಮಗಳು ಕುರಿತು ತರಬೇತಿ ನೀಡಿದರು.

ಸಭಾಪತಿಗಳು ನಿರ್ವಹಿಸಿದ ಕಾರ್ಯಕಲಾಪಗಳಲ್ಲಿ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ರಹಿತ ಪ್ರಶ್ನೆ, ಝೀರೊ ಅವರ್ ಕಲಾಪಗಳನ್ನು ನಡೆಸಲಾಯಿತು. ಮಹಿಳೆಯರಿಗೆ ಅನಗತ್ಯವಾಗಿ ಸೀಜಿರಿನ್ ಬಳಕೆ ಮೂಲಕ ಹೆರಿಗೆ ಮಾಡಿಸುವುದು, ರಸ್ತೆ ದುರಸ್ತಿ, ವೈದ್ಯಕೀಯ ಕಾಲೇಜು ಮಂಜೂರಾತಿ, ವಿದ್ಯಾರ್ಥಿ ವೇತನದ ವಿಳಂಬ, ಮೀಸಲಾತಿ ಮುಂದುವರಿಕೆ, ಕಾರ್ಮಿಕರ ರಕ್ಷಣೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಮುಂತಾದವುಗಳ ಕುರಿತು ಸದಸನದಲ್ಲಿ ಗಂಭೀರ ಚರ್ಚೆ ನಡೆಯಿತು.....Body:ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಬಸವರಾಜ ಹೊರಟ್ಟಿ ಅವರು ಸಚಿವರ ಉತ್ತರಗಳೊಂದಿಗೆ ತಮ್ಮ ಅನುಭವದ ಮಾತುಗಳನ್ನು ಬೆರಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಏಳು ಶೈಕ್ಷಣಿಕ ತಾಲೂಕಿನ 70 ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಣುಕು ಸಂಸತನಲ್ಲಿ ಭಾಗವಹಿಸಿದ್ದರು....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.