ಧಾರವಾಡ : ಸಂಶೋಧಕ ಎಂ.ಎಂ. ಕಲಬುರ್ಗಿ ಕೊಲೆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಕೋರ್ಟ್ಗೆ ಕಲಬುರಗಿ ಅವರ ಪತ್ನಿ ಉಮಾದೇವಿ ಮತ್ತು ಪುತ್ರಿ ರೂಪದರ್ಶಿ ಅವರು ಹಾಜರಾಗಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಎಂ.ಎಂ. ಕಲಬುರ್ಗಿ ಅವರ ಪತ್ನಿ ಮತ್ತು ಪುತ್ರಿ ಪ್ರಮುಖ ದೂರುದಾರರಾಗಿದ್ದಾರೆ. ಹತ್ಯೆ ನಡೆದ ದಿನದ ಸಂಪೂರ್ಣ ಮಾಹಿತಿಯನ್ನ ಇವರು ಪೊಲೀಸರಿಗೆ ನೀಡಿದ್ದರು.
ಇಂದು ಕಲಬುರ್ಗಿ ಅವರು ಕೋರ್ಟ್ಗೆ ಬರುತ್ತಿದ್ದಂತೆ, ಕೋರ್ಟ್ ಆವರಣದಲ್ಲೇ ಭಾವುಕರಾದರು. ಪ್ರಕರಣದ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ ಅವರನ್ನು ಕೂಡ ಇಂದು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
2015ರ ಆಗಸ್ಟ್ 30ರಂದು ಧಾರವಾಡ ಕಲ್ಯಾಣ ನಗರ ನಿವಾಸದಲ್ಲಿ ಕಲಬುರಗಿ ಅವರಿಗೆ ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದರು. ಕೊಲೆ ನಡೆದ ದಿನ ಕಲಬುರ್ಗಿ ಅವರ ಪತ್ನಿ ಉಮಾದೇವಿ ಮತ್ತು ಪುತ್ರಿ ರೂಪದರ್ಶಿ ಮನೆಯಲ್ಲೇ ಇದ್ದರು.