ETV Bharat / state

ಕೋವಿಡ್​​ ಪರಿಸ್ಥಿತಿಯಲ್ಲಿ ಚುನಾವಣೆಗೆ ಅವಸರವೇನಿತ್ತು?: ಎನ್.‌ಹೆಚ್.ಕೋನ ರೆಡ್ಡಿ

ಈಗಾಗಲೇ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ನಾಲ್ಕು ವಿಧಾನ ಪರಿಷತ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಹಾಗಾಗಿ ಪಶ್ಚಿಮ ಕ್ಷೇತ್ರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವು ಖಚಿತ ಎಂದು ಮಾಜಿ‌ ಶಾಸಕ ಎನ್‌.ಹೆಚ್. ಕೋನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

mlc election is not necessary in this covid condtion : NH Konareddy
ಕೋವಿಡ್​​ ಪರಿಸ್ಥಿತಿಯಲ್ಲಿ ಚುನಾವಣೆಗೆ ಅವಸರವೇನಿತ್ತು: ಮಾಜಿ‌ ಶಾಸಕ ಎನ್‌ಹೆಚ್ ಕೋನರೆಡ್ಡಿ
author img

By

Published : Oct 10, 2020, 2:28 PM IST

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಆದ್ರೆ ಕೋವಿಡ್​​ ಪರಿಸ್ಥಿತಿಯಲ್ಲಿ ಚುನಾವಣೆಗೆ ಅವಸರವೇನಿತ್ತು ಎಂದು ಮಾಜಿ‌ ಶಾಸಕ ಎನ್‌.ಹೆಚ್.ಕೋನರೆಡ್ಡಿ ಹೇಳಿದರು. ಇದೇ ವೇಳೆ ಅವರು ಪಶ್ಚಿಮ ಕ್ಷೇತ್ರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ‌ ಶಾಸಕ ಎನ್.‌ಹೆಚ್.ಕೋನ ರೆಡ್ಡಿ

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ನಾಲ್ಕು ವಿಧಾನ ಪರಿಷತ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಹಾಗಾಗಿ ಪಶ್ಚಿಮ ಕ್ಷೇತ್ರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವು ಖಚಿತ ಎಂದರು.

ಇನ್ನು ಬಸವರಾಜ ಹೊರಟ್ಟಿ ಅವರು ಶಿಕ್ಷಣ ಸಚಿವರಾಗಿದ್ದಾಗ 1,065 ಹೈಸ್ಕೂಲ್, 105 ಸರ್ಕಾರಿ ಕಾಲೇಜು ನಿರ್ಮಾಣ ಜೊತೆಗೆ 54 ಸಾವಿರ ಶಿಕ್ಷಕರ ನೇಮಕ ಮಾಡಿದೆ. ಆದ್ರೆ, ಕಷ್ಟದ ಪರಿಸ್ಥಿತಿಯಲ್ಲೀಗ ಯುವಕರಿದ್ದರೂ ಕೂಡ ಬಿಜೆಪಿ ಉದ್ಯೋಗವಕಾಶ ಸೃಷ್ಟಿಸುವ ಕೆಲಸ ಮಾಡಿಲ್ಲ. ಎರಡು ಕೋಟಿ ಉದ್ಯೋಗವಕಾಶದ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಬೇಕು. ಪ್ರಚಾರಕ್ಕೆ ಮಾರು ಹೋಗಿ ಮತ ಹಾಕಬೇಡಿ, ಕೆಲಸ ಮಾಡಿದವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.