ಧಾರವಾಡ: ಧಾರವಾಡದ ಕೃಷಿ ವಿವಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಂದುವರೆದಿದೆ.
ಬ್ಯಾಲೆಟ್ ಪೇಪರ್ ಇರುವ ಕಾರಣಕ್ಕೆ ಮತ ಎಣಿಕೆ ತಡವಾಗಿ ಆರಂಭಗೊಂಡಿದೆ. ನಾಲ್ಕು ಗಂಟೆಗಳ ಕಾಲ ಮತ ಪತ್ರಗಳ ಬಂಡಲಿಂಗ್ ಕಾರ್ಯ ನಡೆದಿತ್ತು. ಬಂಡಲಿಂಗ್ ಬಳಿಕ ಮತ ಎಣಿಕೆ ಪ್ರಾರಂಭವಾಗಿದೆ.
ಒಟ್ಟು 52,068 ಮತ ಚಲಾವಣೆಯಾಗಿದ್ದು, ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಂದು ಸುತ್ತಿಗೆ 14 ಸಾವಿರ ಮತಗಳ ಎಣಿಕೆ ಮಾಡಲಾಗುತ್ತಿದೆ.