ಹುಬ್ಬಳ್ಳಿ : ಕೊರೊನಾ ವೈರಸ್ನಿಂದ ಪಾರಾಗಲು ನಮಗಿರುವ ಒಂದೇ ಮಾರ್ಗವೆಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ವಿಡಿಯೋ ಸಂದೇಶ ನೀಡಿದ್ದಾರೆ.
ಈಗಾಗಲೇ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕೊರೊನಾ ವೈರಸ್ ಸಂಬಂಧಿಸಿದ ಸಾಕಷ್ಟು ಜಾಗೃತಿ ಮಾಹಿತಿ ಸಿಗುತ್ತಿದೆ. ಪ್ರಧಾನಮಂತ್ರಿಯವರು 21 ದಿನಗಳ ಕಾಲ ಲಾಕ್ಡೌನ್ ಮಾಡಿದ್ದಾರೆ. ಅದನ್ನು ಸ್ವಾಗತ ಮಾಡುವುದಷ್ಟೇ ಅಲ್ಲ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ.
ಈ ವೈರಸ್ ವಿರುದ್ಧ ನಾವೆಲ್ಲರೂ ಕೂಡಿ ಜಾಗೃತಿ ಮೂಡಿಸುವ ಕೆಲಸ ಹಾಗೂ ಮನೆಯಿಂದ ಹೊರ ಬರದೆ ಸದೃಢ ಆರೋಗ್ಯಕರ ಭಾರತ ನಿರ್ಮಾಣಕ್ಕೆ ಒಗ್ಗಟ್ಟಾಗಿ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದು ಕೊರೊನಾ ಕುರಿತ ವಿಡಿಯೋ ಸಂದೇಶದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.