ಹುಬ್ಬಳ್ಳಿ: 1 ರಿಂದ 5 ನೇ ತರಗತಿಯ ಶಾಲೆಗಳ ಆರಂಭ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಸಹ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಇಲಾಖೆ ವರದಿ ಆಧರಿಸಿ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಪ್ರಾಥಮಿಕ ತರಗತಿಗಳನ್ನು ನಾವು ನಿನ್ನೆಯಿಂದ ಆರಂಭಿಸಬೇಕಿತ್ತು. ಆದರೆ ದೇಶದ 6 ರಾಜ್ಯಗಳಲ್ಲಿ ಕೊರೊನಾ 2ನೇ ಅಲೆ ಜೋರಾಗಿದೆ. ಅದರಲ್ಲಿ ಕರ್ನಾಟಕವೂ ಸಹ ಒಂದಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ತಜ್ಞರ ವರದಿ ಕೇಳಲಾಗಿದೆ. ತಜ್ಞರ ವರದಿ ಆಧರಿಸಿ ಶಾಲೆ ಆರಂಭ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಖಾಸಗಿ ಶಾಲೆಗಳು ತರಗತಿ ಆರಂಭಿಸಿದರೇ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನವಲಿ ಗ್ರಾಮದ ಸಮೀಪ ಸಮತೋಲಿತ ನೀರು ಸಂಗ್ರಹಣಾ ಜಲಾಶಯ ನಿರ್ಮಾಣ: ಸಿಎಂ ಅಧ್ಯಕ್ಷತೆಯಲ್ಲಿ ಸಭೆ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಈಗಾಗಲೇ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ ರಾಜ್ಯದ ಕಾರ್ಯಪಡೆ ವರದಿ ನೀಡಿದೆ. ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎನ್ನುವ ಚಿಂತನೆಯಲ್ಲಿದ್ದೇವೆ ಎಂದಿದ್ದಾರೆ.