ಧಾರವಾಡ: ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ಹಣ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿವಿಧ ಕಾರ್ಯಕ್ರಮಗಳಿಗಾಗಿ ಧಾರವಾಡಕ್ಕೆ ಆಗಮಿಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಜರಾಯಿ ಇಲಾಖೆಗೆ ಆದಾಯದ ಪ್ರಶ್ನೆ ಬರುವುದಿಲ್ಲ. ನಮ್ಮಲ್ಲಿ 34 ಸಾವಿರ ದೇವಾಲಯಗಳಿದ್ದು ಆ ದೇವಾಲಯಗಳ ಹುಂಡಿಗೆ ಬರುವ ಹಣವೆಲ್ಲವೂ ಆ ದೇವಸ್ಥಾನಕ್ಕೇ ಸೇರುತ್ತದೆ. ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ಹಣ ವರ್ಗಾಯಿಸಲು ಸಾಧ್ಯವಿಲ್ಲ. ಕೆಲವೊಂದು ದೇವಾಲಯಗಳ ಹುಂಡಿಗೆ ಹೆಚ್ಚಿನ ಹಣ ಬಂದಿರುತ್ತದೆ. ಅದು ಆ ದೇವಾಲಯದ ಅಭಿವೃದ್ಧಿಗೆ ಸೀಮಿತ. ಆ ಹಣವನ್ನು ಬೇರೆ ದೇವಾಲಯಕ್ಕೆ ಕೊಡುವ ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹೊಸ ಬಸ್ ಖರೀದಿ: ಶಕ್ತಿ ಯೋಜನೆಯಿಂದ ದಟ್ಟಣೆ ಹೆಚ್ಚಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, 4 ವರ್ಷದಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಭವಾಗಿದೆ. ಈಗ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ಮೇಲಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಹಾಗಾಗಿ ಹೊಸ ಬಸ್‌ಗಳು ಬರಲಿವೆ. ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.
ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಆರೋಪಗಳ ಬಗ್ಗೆ ಮಾತನಾಡಿ, ಬಿಜೆಪಿಯವರು ತಾವು ಕೆಲಸ ಮಾಡುವುದಿಲ್ಲ, ಕೆಲಸ ಮಾಡುವವರಿಗೂ ಬಿಡುವುದಿಲ್ಲ. ಕೆಲಸ ಆಗುವುದಕ್ಕೆ ಹರಕತ್ತು, ಆಗದೇ ಇರುವುದಕ್ಕೆ ಕುಮ್ಮಕ್ಕು ಅಂತಾರಲ್ಲ ಹಾಗಾಗಿದೆ. ಅವರು ನಾಲ್ಕು ವರ್ಷದಿಂದ ಒಂದೇ ಒಂದು ಬಸ್ ಖರೀದಿಸಿಲ್ಲ, ಬಸ್ ನಿಲ್ದಾಣಗಳನ್ನೂ ಕಟ್ಟಲಿಲ್ಲ. 13,888 ಸಿಬ್ಬಂದಿ ನಿವೃತ್ತರಾಗಿದ್ದರು. ನಾಲ್ಕು ವರ್ಷದಲ್ಲಿ ಒಂದೇ ಒಂದು ನೇಮಕಾತಿ ಮಾಡಲಿಲ್ಲ ಎಂದು ದೂರಿದರು.
-
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನನ್ನನ್ನು ಪಕ್ಷದ ಮುಖಂಡರೊಂದಿಗೆ ನವಲಗುಂದ ವಿಧಾನಸಭಾ ಶಾಸಕರಾದ ಶ್ರೀ ಕೋನರಡ್ಡಿ ಅವರು ಆತ್ಮೀಯದಿಂದ ಸ್ವಾಗತಿಸಿದ ಕ್ಷಣ. #Navalagund #Hubballi #Dharwad #RamalingaReddy #Karnataka @nhkonaraddy pic.twitter.com/vNAcvR4c4q
— Ramalinga Reddy (@RLR_BTM) January 8, 2024 " class="align-text-top noRightClick twitterSection" data="
">ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನನ್ನನ್ನು ಪಕ್ಷದ ಮುಖಂಡರೊಂದಿಗೆ ನವಲಗುಂದ ವಿಧಾನಸಭಾ ಶಾಸಕರಾದ ಶ್ರೀ ಕೋನರಡ್ಡಿ ಅವರು ಆತ್ಮೀಯದಿಂದ ಸ್ವಾಗತಿಸಿದ ಕ್ಷಣ. #Navalagund #Hubballi #Dharwad #RamalingaReddy #Karnataka @nhkonaraddy pic.twitter.com/vNAcvR4c4q
— Ramalinga Reddy (@RLR_BTM) January 8, 2024ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನನ್ನನ್ನು ಪಕ್ಷದ ಮುಖಂಡರೊಂದಿಗೆ ನವಲಗುಂದ ವಿಧಾನಸಭಾ ಶಾಸಕರಾದ ಶ್ರೀ ಕೋನರಡ್ಡಿ ಅವರು ಆತ್ಮೀಯದಿಂದ ಸ್ವಾಗತಿಸಿದ ಕ್ಷಣ. #Navalagund #Hubballi #Dharwad #RamalingaReddy #Karnataka @nhkonaraddy pic.twitter.com/vNAcvR4c4q
— Ramalinga Reddy (@RLR_BTM) January 8, 2024
ಸಚಿವರು ಹುಬ್ಬಳ್ಳಿಗೆ ಆಗಮಿಸಿದ್ದರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನನ್ನನ್ನು ಪಕ್ಷದ ಮುಖಂಡರೊಂದಿಗೆ ನವಲಗುಂದ ವಿಧಾನಸಭಾ ಶಾಸಕರಾದ ಶ್ರೀ ಕೋನರಡ್ಡಿ ಅವರು ಆತ್ಮೀಯದಿಂದ ಸ್ವಾಗತಿಸಿದ ಕ್ಷಣ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರು ಮಾತ್ರ ಕಾಂಗ್ರೆಸ್ ಸರ್ಕಾರದ ಆದ್ಯತೆ: ಬಿ.ವೈ.ವಿಜಯೇಂದ್ರ