ಧಾರವಾಡ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯಿಸಿದ್ದು, ಹುಬ್ಬಳ್ಳಿ - ಧಾರವಾಡದ ಮಹಾನಗರ ಆಗಿದೆ. ಅದನ್ನು ಹುಬ್ಬಳ್ಳಿ, ಧಾರವಾಡ ಅಂತಾ ಬೇರೆ ಬೇರೆ ಮಾಡೋದು ಬೇಡ ಎಂದಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ಅವಳಿ ನಗರದ ಜನತೆ ದೊಡ್ಡ ಪಕ್ಷವಾಗಿ ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಮೇಯರ್ ಸಹ ಬಿಜೆಪಿಯವರೇ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು. ನಾನು ಧಾರವಾಡ ಜಿಲ್ಲೆ ಉಸ್ತುವಾರಿ ಮಂತ್ರಿ, ಅದನ್ನು ಧಾರವಾಡ ಜಿಲ್ಲೆ ಎಂದೇ ತಿಳಿದಿದ್ದೇನೆ, ಅದನ್ನು ಹುಬ್ಬಳ್ಳಿ - ಧಾರವಾಡ ಅಂತಾ ಪ್ರತ್ಯೇಕ ಮಾಡೋದು ಬೇಡ ಎಂದರು.
ಇನ್ನು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ಅಮೃತ ಮಹೋತ್ಸವ ಯೋಜನೆ ಜಾರಿಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಯೋಜನೆ ಜಾರಿಗೊಳಿಸಬೇಕಿದೆ. ಇದಕ್ಕಾಗಿ ಸಭೆ ನಡೆಸಿದ್ದೇವೆ ಸಭೆಯಲ್ಲಿ ಅನೇಕ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಜಿಲ್ಲೆಯಲ್ಲಿ ಅನೇಕ ಯೋಜನೆಗಳು ಕುಂಠಿತವಾಗಿವೆ ಅವುಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುತ್ತೇವೆ ಎಂದರು.
ಇದನ್ನೂ ಓದಿ:ಸೈಕ್ಲಿಂಗ್ ಸ್ಪರ್ಧೆಯಲ್ಲೇ ಹೃದಯಾಘಾತ: ಹುಬ್ಬಳ್ಳಿಯ ಸೈಕ್ಲಿಸ್ಟ್ ವಿಧಿವಶ