ಧಾರವಾಡ: ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ಅನ್ಯ ಜಿಲ್ಲೆಯ ವಲಸೆ ಕಾರ್ಮಿಕರನ್ನು ಅವರ ಜಿಲ್ಲೆಗೆ ಕಳಿಸಲಾಯಿತು.
ಜಿಲ್ಲೆಯ ಕರ್ನಾಟಕ ಕಲಾ ಮಹಾವಿದ್ಯಾಲಯದ ಮುಂಭಾಗದಲ್ಲಿ ರಾಜ್ಯದೊಳಗಿನ ಅನ್ಯ ಜಿಲ್ಲೆಗಳ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1200 ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಸರ್ಕಾರದ ವೆಚ್ಚದಲ್ಲಿ 40 - 50 ಬಸ್ಸುಗಳಲ್ಲಿ ಕಳಿಸಲಾಯಿತು.
ಇನ್ನು ಕಲಬುರಗಿ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತಿತರ ಜಿಲ್ಲೆಗಳ ಕಾರ್ಮಿಕರನ್ನು ಸಹ ಕಳಿಸಲಾಯಿತು.