ETV Bharat / state

ಹೋಮ್​ ಐಸೊಲೇಷನ್​ ಆದವರ ಮೇಲೆ ನಿಗಾವಹಿಸಲು 24 ವಿಶೇಷ ತಂಡ: ಡಿಸಿ ನಿತೇಶ್ ಪಾಟೀಲ - Meeting of Dharwad Home Isolation Monitoring Teams

ಜಿಲ್ಲೆಯಲ್ಲಿ ಸುಮಾರು 506 ಕ್ಕಿಂತ ಹೆಚ್ಚು ಲಕ್ಷಣರಹಿತ ಕೊರೊನಾ ಸೋಂಕಿತರು ಹೋಮ್ ಐಸೊಲೇಷನ್ ಆಗಿದ್ದಾರೆ. ಅವರ ಮನೆಗಳಿಗೆ ಭೇಟಿ ನೀಡಿ, ಹೋಮ್ ಐಸೊಲೇಷನ್ ನಿಯಮಗಳ ಪಾಲನೆ, ಆರೋಗ್ಯ ಸ್ಥಿರತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಬೇಕು. ಅವರ ಆರೋಗ್ಯ ಪರೀಕ್ಷೆಗಾಗಿ ಪ್ರತಿ ವೈದ್ಯರ ನೇತೃತ್ವದಲ್ಲಿ ಹುಬ್ಬಳ್ಳಿ ಹಾಗೂ ಇನ್ನಿತರ ತಾಲೂಕಿಗೆ 16 ಮತ್ತು ಧಾರವಾಡ, ಅಳ್ನಾವರ ತಾಲೂಕಿಗೆ 8 ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಡಿಸಿ ನಿತೇಶ್ ಪಾಟೀಲ
ಡಿಸಿ ನಿತೇಶ್ ಪಾಟೀಲ
author img

By

Published : Aug 5, 2020, 7:39 PM IST

ಧಾರವಾಡ: ಲಕ್ಷಣರಹಿತ ಕೊರೊನಾ ಸೋಂಕಿತರಿಗೆ ಹೋಮ್ ಐಸೊಲೇಷನ್ ಆಯ್ಕೆಗೆ ಅವಕಾಶವಿರುವುದರಿಂದ ಹೆಚ್ಚು ಜನ ಹೋಮ್ ಐಸೊಲೇಷನ್ ಆಗುತ್ತಿದ್ದು, ಅವರ ಮನೆಗೆ ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಲು ಮತ್ತು ಅಗತ್ಯ ಪರೀಕ್ಷೆ, ಆರೋಗ್ಯ ಸಲಹೆ ನೀಡಲು ವೈದ್ಯರ ನೇತೃತ್ವದಲ್ಲಿ 24 ವಿಶೇಷ ತಂಡಗಳನ್ನು ರಚಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಅವರು ಇಂದು ಕೊರೊನಾ ಸೋಂಕಿತರ ಶಿಫ್ಟಿಂಗ್ ತಂಡಗಳ ಮತ್ತು ಹೋಮ್ ಐಸೋಲೇಷನ್ ಮೇಲ್ವಿಚಾರಣೆ ತಂಡಗಳ ಸಭೆ ನಡೆಸಿತು. ಸೋಂಕಿತರ ಶಿಫ್ಟಿಂಗ್ ತಂಡ ಚೆನ್ನಾಗಿ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಹೋಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುವ ಸೋಂಕಿತರ ಸಂಖ್ಯೆ ಕಡಿಮೆ ಇತ್ತು. ಈಗ ಹೆಚ್ಚು ಜನ ಹೋಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚು ತಂಡಗಳ ಅಗತ್ಯವಿದೆ. ತಂಡಗಳು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು 506 ಕ್ಕಿಂತ ಹೆಚ್ಚು ಲಕ್ಷಣ ರಹಿತ ಕೊರೊನಾ ಸೋಂಕಿತರು ಹೋಮ್ ಐಸೊಲೇಷನ್ ಆಗಿದ್ದಾರೆ. ಅವರ ಮನೆಗಳಿಗೆ ಭೇಟಿ ನೀಡಿ, ಹೋಮ್ ಐಸೊಲೇಷನ್ ನಿಯಮಗಳ ಪಾಲನೆ, ಆರೋಗ್ಯ ಸ್ಥಿರತೆ ಹಾಗೂ ಮುನ್ನೆಚರಿಕೆ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಬೇಕು. ಅವರ ಆರೋಗ್ಯ ಪರೀಕ್ಷೆಗಾಗಿ ಪ್ರತಿ ವೈದ್ಯರ ನೇತೃತ್ವದಲ್ಲಿ ಹುಬ್ಬಳ್ಳಿ ಹಾಗೂ ಇನ್ನಿತರ ತಾಲೂಕಿಗೆ 16 ಮತ್ತು ಧಾರವಾಡ, ಅಳ್ನಾವರ ತಾಲೂಕಿಗೆ 8 ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ತಂಡವು ಪ್ರತಿ ದಿನ ಕನಿಷ್ಟ 12 ರಿಂದ 15 ಹೊಮ್ ಐಸೊಲೇಷನ್ ಆಗಿರುವ ಸೋಂಕಿತರ ಮನೆಗೆ ಭೇಟಿ ನೀಡಿ, ವರದಿ ಮಾಡುವುದು ಕಡ್ಡಾಯವಾಗಿದೆ. ಹೋಮ್ ಐಸೋಲೇಷನ್ ಆದವರ ಮಾಹಿತಿಯನ್ನು ಸಂಗ್ರಹಿಸಿ, ಈ ತಂಡದೊಂದಿಗೆ ಸಂಪರ್ಕ ಮತ್ತು ಸಮನ್ವಯ ಸಾಧಿಸಲು ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ನಜ್ಮಾ ಫೀರಜಾದೆ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮತ್ತು ಸಮಾಜ ಕಲ್ಯಾಣ ಇಲಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ಅವರ ತಂಡವನ್ನು ರಚಿಸಲಾಗಿದೆ. ಹೋಮ್ ಐಸೊಲೇಷನ್​ನಲ್ಲಿರುವವರು ಯಾವುದೇ ಮಾಹಿತಿ, ಆರೋಗ್ಯ ಚಿಕಿತ್ಸೆ ಅಗತ್ಯವಿದ್ದಲ್ಲಿ ನೋಡಲ್ ಅಧಿಕಾರಿ ಡಾ.ಸಂಪತ್ ಸಿಂಗ್ ರಂಗವಲ್ಲಿ ಅವರನ್ನು (ಮೊ.9448746499) ಸಂಪರ್ಕಿಸಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.