ಹುಬ್ಬಳ್ಳಿ: ಆಧುನಿಕ ದಿನಮಾನಗಳಲ್ಲಿ ತಂತ್ರಜ್ಞಾನ, ನವಮಾಧ್ಯಮಗಳಿಂದ ಕ್ಷಣ ಕ್ಷಣವೇ ಮಾಹಿತಿಗಳು ಲಭ್ಯವಾಗುತ್ತವೆ ನಿಜ, ಆದರೆ, ಜನರನ್ನು ಸೆಳೆಯಲು ಮಾಧ್ಯಮಗಳ ಒಂದಿಲ್ಲೊಂದು ಹಪಾಹಪಿ ನಡೆಸುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಜೆ.ಸಿ.ನಗರದಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಧಾರವಾಡದ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪತ್ರಕರ್ತರಿಗೆ ನವ ಮಾಧ್ಯಮಗಳ ಸವಾಲು ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರವನ್ನು ಸಚಿವ ಜಗದೀಶ್ ಶೆಟ್ಟರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಮಾಡಿದ್ರು
ನಂತರ ಮಾತನಾಡಿದ ಜೋಶಿ ಅವರು, ಇತ್ತಿಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳು ಎಷ್ಟೇ ಮುಂದುವರೆದರೂ ಹಿಂದಿನ ಪತ್ರಿಕಾ ಮಾಧ್ಯಮದಷ್ಟು ಮಹತ್ವ ಪಡೆಯಲು ಸಾಧ್ಯವಾಗುತ್ತಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಸುದೀರ್ಘವಾದ ಇತಿಹಾಸವಿದ್ದು, 1843 ರಲ್ಲಿ ಹೊರಬಂದ ಮಂಗಳೂರು ಸಮಾಚಾರ ಪತ್ರಿಕೆ 15 ದಿನಗಳಿಗೆ ಒಮ್ಮೆ ಬಂದರು ಜನರು ಪತ್ರಿಕೆಗಾಗಿ ಕಾದು ಕುಳಿತು ಸುದ್ದಿಗಳನ್ನು ಓದುತ್ತಿದ್ದರು. ಆದರೆ, ಇದೀಗ ಟೆಕ್ನಾಲಜಿಯಿಂದಾಗಿ ಕ್ಷಣ ಕ್ಷಣವೇ ಮಾಹಿತಿ ತಿಳಿಯಬಹುದಾಗಿದ್ದು, ಜನರಲ್ಲಿ ಸುದ್ದಿ ಪತ್ರಿಕೆಗಳನ್ನು ಓದುವ ಕುತೂಹಲ ಕಡಿಮೆ ಆಗಿದೆ ಎಂದರು. ಇತ್ತಿಚಿನ ದಿನಗಳಲ್ಲಿ ನವ ಮಾಧ್ಯಮಗಳು ಜನರನ್ನು ಸೆಳೆಯಲು ಹಪಹಪ್ಪಿಸುತ್ತಿದ್ದು, ಸುದ್ದಿಗಳತ್ತ ಜನರನ್ನು ಸೆಳೆಯಲು ಮಾಧ್ಯಮ ಸಂಸ್ಥೆಗಳು ಅನುಸರಿಸುತ್ತಿರುವ ಮಾರ್ಗಗಳನ್ನು ನಾವು ಅವಲೋಕನ ಮಾಡಿಕೊಳ್ಳಬೇಕು ಎಂದ್ರು.
ನಂತರ ಮಾತನಾಡಿದರ ಸಚಿವ ಜಗದೀಶ್ ಶೆಟ್ಟರ್, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ತಮ್ಮದೇ ಆದ ಮಹತ್ವವಿದೆ. ಸರ್ಕಾರ ಹಾಗೂ ವ್ಯವಸ್ಥೆಯನ್ನು ಪ್ರಶ್ನಿಸಿ, ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು ಎಂದರು.