ETV Bharat / state

ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು: ಮಾದಕವಸ್ತು ಸಪ್ಲೈ ಆಗ್ತಿರೋದು ಎಲ್ಲಿಂದ?

author img

By

Published : Apr 1, 2021, 10:03 AM IST

ವಾಣಿಜ್ಯ ನಗರಿ ಹುಬ್ಬಳ್ಳಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಈ ನಗರದಲ್ಲಿ ಸದ್ಯ ಗಾಂಜಾ ಘಾಟು ಜೋರಾಗಿ ಕೇಳಿ ಬರುತ್ತಿದೆ. ಯಾವಾಗ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಓಪನ್ ಆದ್ವೋ, ಈ ಗ್ಯಾಂಗ್ ಫುಲ್ ಆ್ಯಕ್ಟಿವ್ ಆಗಿದೆ. ಅದರಲ್ಲೂ ಕಳೆದ ಒಂದೇ ವಾರದಲ್ಲಿ ಮೂರು ಕಡೆಗಳಲ್ಲಿ ಗಾಂಜಾ ಜಪ್ತಿ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು
ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಗಾಂಜಾ ಗ್ಯಾಂಗ್ ಮತ್ತೆ ಫುಲ್ ಆ್ಯಕ್ಟಿವ್ ಆಗಿದ್ದು, ಪೆಡ್ಲರ್​​ಗಳು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಮೂರು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿ, ಗಾಂಜಾ ಗ್ಯಾಂಗ್ ಹಿಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು

ಶಾಲಾ - ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಒಂದು ಗ್ಯಾಂಗ್ ಸಿಕ್ಕಿಬಿದ್ದಿದೆ‌. ಹೀಗಾಗಿಯೇ ಸದ್ಯ ಪೋಷಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಏಕೆಂದರೆ ಕಾಲೇಜು ವಿದ್ಯಾರ್ಥಿಗಳನ್ನು ಇವರು ಟಾರ್ಗೆಟ್ ಮಾಡ್ತಿದ್ದಾರೆ ಎನ್ನುವ ಮಾಹಿತಿ ಸದ್ಯ ಸಿಕ್ಕಿದೆ. ಅದರಲ್ಲೂ ಮೊನ್ನೆ ರಾಮನಗರದ ಶಾಲೆ ಬಳಿ, ಹರೀಶ್ ಛಲವಾದಿ, ನಿಖಿಲ್ ಪತಿಕೊಂಡ ಎಂಬುವ ಇಬ್ಬರನ್ನೂ ಬಂಧಿಸಲಾಗಿದ್ದು, 300 ಗ್ರಾಂ ಅಧಿಕ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಇವರಿಗೆ ಎಲ್ಲಿಂದ ಗಾಂಜಾ ಸಿಗುತ್ತಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ವೇಳೆ, ಹುಬ್ಬಳ್ಳಿಯ ಅಶೋಕನಗರ ಹಾಗೂ ಧಾರವಾಡ ಠಾಣೆಗಳಲ್ಲಿ ಮತ್ತೆರೆಡು ಪ್ರಕರಣ ದಾಖಲಾಗಿವೆ. ಹೀಗಾಗಿ ಒಂದೇ ವಾರದಲ್ಲಿ ಮೂರು ಕಡೆಗಳಲ್ಲಿ ಪೊಲೀಸರು ಗಾಂಜಾ ಅಡ್ಡೆ ಮೇಲೆ ರೇಡ್ ಮಾಡಿದ್ದಾರೆ. ಆದರೆ, ಈ ಗ್ಯಾಂಗ್ ಕಿಂಗ್ ಫಿನ್ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ:ಹಳೆ ದ್ವೇಷ: ಯುವಕನ ಖಾಸಗಿ ಅಂಗಕ್ಕೆ ರಾಡ್​​​ನಿದ ಹೊಡೆದ ಕ್ರೂರಿಗಳು

ಸದ್ಯ ಪೊಲೀಸರು ಕೂಡ ಎಲ್ಲಾ ಆ್ಯಂಗಲ್​ನಿಂದ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಶಾಲಾ - ಕಾಲೇಜುಗಳಲ್ಲಿ ಇಲಾಖೆಯಿಂದಲೇ ಜಾಗೃತಿ ಕಾರ್ಯಕ್ರಮ ಕೂಡ ಮಾಡಲಾಗುತ್ತಿದೆಯಂತೆ‌. ಈ ನಡುವೆ ಮೊನ್ನೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಮುಂಬೈ ಮೂಲದ ಪೆಡ್ಲರ್ ವೆಂಕಟೇಶ್ ಎಂಬಾತ ಹುಬ್ಬಳ್ಳಿಯ ಪ್ರಸಿದ್ಧ ಹೋಟೆಲ್ ಉದ್ಯಮಿ ಮಗಳಿಗೆ ಡ್ರಗ್ಸ್ ನೀಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಹೋಟೆಲ್ ಉದ್ಯಮಿ ಮಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಕೆ ಯಾರಿಗಾದರೂ ಅವಳಿ ನಗರದಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಾ ಎನ್ನೋ ಮಾಹಿತಿ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.