ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ದೇವಸ್ಥಾನದಲ್ಲಿ ಸಚ್ಛತಾ ಕೆಲಸ ಮಾಡುತ್ತಿದ್ದ ಸೇವಕನಿಗೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ರಿಂದ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಣಕಲ್ ಗ್ರಾಮದ ಉಳವಿ ಶ್ರೀಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಉಣಕಲ್ ಗ್ರಾಮದ ನಿವಾಸಿ ಶಿವಾನಂದ ಗಂಬ್ಯಾಪೂರ್ ಹಲ್ಲೆ ಮಾಡಿದ್ದಾನೆ ಎಂದು ಸವದತ್ತಿ ಜಿಲ್ಲೆಯ ಬಸಪ್ಪ ಗುಡಿ (ಸೇವಕ) ಆರೋಪಿದ್ದಾನೆ. ಈತ ಕಳೆದ 9 ವರ್ಷಗಳಿಂದ ಈ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಎಂದಿನಂತೆ ದೇವಸ್ಥಾನದ ಕಸ ಕೂಡಿಸುತ್ತಿದ್ದಾಗ ಶಿವಾನಂದ ಗಂಬ್ಯಾಪೂರ್ಗೆ ಸ್ವಲ್ಪ ಸರಿದು ಕೂಡು ಎಂದು ಹೇಳಿದ್ದಾನೆ. ಆಗ ಕೋಪಗೊಂಡ ಶಿವಾನಂದ ಕೋಪಗೊಂಡು ಬಸಪ್ಪನೊಂದಿಗೆ ಜಗಳ ತೆಗೆದಿದ್ದಾನೆ.
ಆಗ ಸ್ಥಳದಲ್ಲೇ ಇದ್ದ ಪೂಜಾರಿಗಳು, ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಇಷ್ಟಕ್ಕೆ ಬಿಡದ ಶಿವಾನಂದ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಬಸಪ್ಪನಿಗೆ ಹಿಗ್ಗಾಮುಗ್ಗಾ ಕಾಲಿನಿಂದ ಒದ್ದಿದ್ದಾನೆ. ಒದ್ದು ಗಾಯಗೊಳಿಸಿದ್ದಾನೆ. ಪರಿಣಾಮ ಕಿಡ್ನಿ ಹಾಗೂ ಎದೆಗೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡ ಬಸಪ್ಪನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.