ETV Bharat / state

ಕಿತ್ತೂರು ಕರ್ನಾಟಕ : 2023ರಲ್ಲಿ ನಡೆದ ಸಿಹಿ‌ ಕಹಿ ಘಟನೆಗಳ ಹಿನ್ನೋಟ

2023ರಲ್ಲಿ ಕಿತ್ತೂರು ಕರ್ನಾಟಕದಲ್ಲಿ ನಡೆದ ವಿವಿಧ ಘಟನಾವಳಿಗಳ ಹಿನ್ನೋಟ ಇಲ್ಲಿದೆ.

major-incidents-in-kittur-karnataka-in-2023
ಕಿತ್ತೂರು ಕರ್ನಾಟಕ : 2023ರಲ್ಲಿ ನಡೆದ ಸಿಹಿ‌ ಕಹಿ ಘಟನೆಗಳ ಹಿನ್ನೋಟ
author img

By ETV Bharat Karnataka Team

Published : Dec 30, 2023, 9:28 PM IST

ಹುಬ್ಬಳ್ಳಿ : ಕಿತ್ತೂರು ಕರ್ನಾಟಕ 2023ರಲ್ಲಿ ಸಾಕಷ್ಟು ಸಿಹಿ ಮತ್ತು ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ ಕಿತ್ತೂರು ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿದ್ರೆ, ಸಿದ್ದೇಶ್ವರ ಸ್ವಾಮೀಜಿ ಸಾವಿನಿಂದ ಆಧ್ಯಾತ್ಮಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.‌ ಇದರ ಮಧ್ಯೆ ರಾಜಕೀಯ ಏರಿಳಿತ ಹಾಗೂ ಅಪಘಾತ, ಅವಘಡಗಳ ಹಿನ್ನೋಟ ಇಲ್ಲಿದೆ.

  • ಉತ್ತರ ಕರ್ನಾಟಕದ ಹೆಬ್ಬಾಗಲು ಧಾರವಾಡ ಜಿಲ್ಲೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಹಲವು ಹೋರಾಟಗಳು ನಡೆದವು. ಕೊನೆಗೆ ಕೇಂದ್ರ ಸರ್ಕಾರ ಜ.1ರಂದು ಕಳಸಾ ಬಂಡೂರಿ ಯೋಜನೆ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿತು. ಬಿಜೆಪಿ ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸಿದ್ದು ವಿಶೇಷವಾಗಿದೆ.
  • ಜ. 12 ರಂದು ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಅದಕ್ಕೂ ಮುನ್ನ ಬೃಹತ್ ರೋಡ್ ಶೋ ನಡೆಸಿದ್ದರು. ಈ ವೇಳೆ ಬಾಲಕನೋರ್ವ ಪೊಲೀಸ್ ಸರ್ಪಗಾವಲು ಭೇದಿಸಿ ಪ್ರಧಾನಿ ಮೋದಿಯವರಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
  • ಮಾ.‌ 12ರಂದು ನಗರದ ಐಐಟಿ ಕ್ಯಾಂಪಸ್ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
  • ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಏರುಪೇರುಗಳಿಗೆ ಸಾಕ್ಷಿಯಾಗಿದೆ. ಸತತವಾಗಿ 6 ಬಾರಿ ಗೆಲುವು ಸಾಧಿಸಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತ್ತು. ಬಳಿಕ ಅವರಿಗೆ ಟಿಕೆಟ್ ಕೊಡಿಸಲು 16 ಪಾಲಿಕೆ ಸದಸ್ಯರು ಹಾಗೂ 49 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ಅದಕ್ಕೂ ಹೈಕಮಾಂಡ್ ಮಣಿಯದೇ ಶೆಟ್ಟರ್ ಶಿಷ್ಯ ಮಹೇಶ ಟೆಂಗಿನಕಾಯಿಗೆ ಟಿಕೆಟ್ ನೀಡಿದ್ದರಿಂದ ಬೇಸತ್ತ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ತಮ್ಮ ಎದುರಾಳಿ ಪಕ್ಷವಾದ ಕಾಂಗ್ರೆಸ್​ನ್ನು ಏ. 17 ರಂದು ಸೇರ್ಪಡೆಗೊಂಡರು. ಬಳಿಕ ಕಾಂಗ್ರೆಸ್​ನಿಂದ ಟಿಕೆಟ್ ಪಡೆದು ಶಿಷ್ಯ ಮಹೇಶ ಟೆಂಗಿನಕಾಯಿ ಎದುರು ಪರಾಭವಗೊಂಡರು.
  • ಬಹುನಿರೀಕ್ಷೆಯ ವಂದೇ ಭಾರತ ರೈಲು ಜೂನ್ 19ರಂದು ಬೆಂಗಳೂರು- ಧಾರವಾಡ ನಡುವೆ ಪರೀಕ್ಷಾರ್ಥ ಸಂಚಾರ ನಡೆಸಿತು. ಜೂನ್ 27ಕ್ಕೆ ಪ್ರಧಾನಿ ನರೇಂದ್ರ‌ ಮೋದಿ ವರ್ಚುವಲ್​ನಲ್ಲಿ ಚಾಲನೆ ನೀಡಿದರು.
  • ಬೆಳಗಾವಿ ರಾಜಕೀಯ ಸ್ಥಾನ ಪಲ್ಲಟ : ವಿಧಾನಸಭೆ ಚುನಾವಣೆಗೂ ಮುನ್ನ ಪ್ರಭಾವಿ ಬಿಜೆಪಿ ಮುಖಂಡ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿ, ಅಥಣಿಯಿಂದ ಗೆದ್ದು ಬೀಗಿದರು. ಇನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸೇರಿದ್ದ ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ ಸೋಲನ್ನು ಅನುಭವಿಸಿದ್ದರು. ಈ ಬಾರಿ ಮತದಾರರು ಜಿಲ್ಲೆಯಲ್ಲಿ ಐವರು ಹೊಸ ಶಾಸಕರಿಗೆ ಮಣೆ ಹಾಕಿದ್ದಾರೆ. 11 ಕಾಂಗ್ರೆಸ್ ಶಾಸಕರು, 7 ಬಿಜೆಪಿ‌ ಶಾಸಕರು ಗೆದ್ದು ಬಂದಿದ್ದಾರೆ.
  • ಒಂದೇ ಕುಟುಂಬದ ಮೂವರು ಬಲಿ : ಬೆಳಗಾವಿಯ ಶಾಹು ನಗರದಲ್ಲಿ ವಿದ್ಯುತ್ ಅವಘಡದಿಂದ ಅಜ್ಜ, ಅಜ್ಜಿ ಹಾಗೂ ಮೊಮ್ಮಗಳು ಮೃತಪಟ್ಟ ದಾರುಣ ಘಟನೆ ನಡೆದಿತ್ತು. ರಾಮದುರ್ಗ ತಾಲ್ಲೂಕಿನ ಅರಿಬೆಂಚಿ ತಾಂಡಾದ ನಿವಾಸಿಗಳಾದ ಸದ್ಯ ಬೆಳಗಾವಿಯಲ್ಲಿ ನೆಲೆಸಿದ್ದ ಈರಪ್ಪ ರಾಠೋಡ (55), ಪತ್ನಿ ಶಾಂತವ್ವ ರಾಠೋಡ (50), 3ನೇ ತರಗತಿ ಓದುತ್ತಿದ್ದ ಮೊಮ್ಮಗಳು ಅನ್ನಪೂರ್ಣಾ ಎಂದು ಗುರುತಿಸಲಾಗಿತ್ತು.
  • ಜೈನ ಮುನಿ ಹತ್ಯೆ : ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜ ಅವರು ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದರು. ಅವರ ಶವ ದೇಹವನ್ನು ತುಂಡು ತಂಡಾಗಿ ಕತ್ತರಿಸಿದ ಸ್ಥಿತಿಯಲ್ಲಿ ರಾಯಬಾಗ ತಾಲ್ಲೂಕಿನ ಕಟಕಬಾವಿಯ ಕೊಳವೆಬಾವಿಯಲ್ಲಿ ಪತ್ತೆಯಾಗಿತ್ತು. ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಚೀಲದಲ್ಲಿ ಹಾಕಿ ಕೊಳವೆಬಾವಿಯೊಳಗೆ ಹಾಕಲಾಗಿತ್ತು. ನಿರಂತರ 10 ತಾಸು ಕಾರ್ಯಾಚರಣೆ ನಡೆಸಿ ಶವದ ತುಂಡುಗಳನ್ನು ಪತ್ತೆ ಮಾಡಲಾಗಿತ್ತು. ಈ ಘಟನೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣದಲ್ಲಿ ಜೈನ ಮುನಿ ಆಪ್ತ ಹಿರೇಕೋಡಿ ಗ್ರಾಮದ ನಾರಾಯಣ ಮಾಳಿ ಮತ್ತು ಚಿಕ್ಕೋಡಿ ಪಟ್ಟಣದ ಹುಸೇನ ದಾಲಾಯತ್‌ ಅವರನ್ನು ಪೊಲೀಸರು ಬಂಧಿಸಿದ್ದರು.
  • ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ : ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಪ್ರೇಮಿಗಳು ಮನೆ ಬಿಟ್ಟು ಹೋದ ಘಟನೆಯಿಂದ ಆಕ್ರೋಶಗೊಂಡ ಯುವತಿ ಮನೆಯವರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿತ್ತು. ಡಿಸಿಎಂ, ಗೃಹ ಸಚಿವ ಪರಮೇಶ್ವರ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಎಸ್ಟಿ ಆಯೋಗ ಸೇರಿ ಮತ್ತಿತರ ರಾಜಕೀಯ ನಾಯಕರು ಭೇಟಿ ನೀಡಿ ಸಂತ್ರಸ್ತೆಗೆ ಧೈರ್ಯ ತುಂಬಿದ್ದರು. ಘಟನೆ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಘಟನೆ ನೋಡಿಯೂ ಅಸಹಾಯಕರಂತೆ ನಿಂತಿದ್ದ ಪ್ರತ್ಯಕ್ಷದರ್ಶಿಗಳಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಪ್ರಕರಣದಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಸಿಐಡಿ ತನಿಖೆ ಮುಂದುವರೆದಿದೆ.
  • ಚಳಿಗಾಲ ಅಧಿವೇಶನ : ಡಿ.4ರಿಂದ 15ರ ವರೆಗೆ 10 ದಿನಗಳ ಕಾಲ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಿತು. ಈ ವೇಳೆ ಬೆಳಗಾವಿ ಸಮೀಪ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಸ್ಥಾಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಹಿಂದಿನ ಅಧಿವೇಶನಕ್ಕಿಂತ ಈ ಬಾರಿ ಪ್ರತಿಭಟನೆಗಳ ಕಾವು ಕಡಿಮೆ ಆಗಿತ್ತು. ಇನ್ನು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಅಷ್ಟಕ್ಕಷ್ಟೆ. ಜನರ ನಿರೀಕ್ಷೆ ಈ ಬಾರಿಯೂ ಹುಸಿಯಾಯಿತು.
  • ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ : ನಡೆದಾಡುವ ದೇವರು, ಶತಮಾನದ ಸಂತ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜ. 2 ರಂದು ಲಿಂಗೈಕ್ಯರಾದರು. ಅವರ ಸಾವಿನ ಸುದ್ದಿ ಕೇಳಿ ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಅವರ ಅಂತಿಮ ದರ್ಶನಕ್ಕೆ ಹರಿದು ಬಂದರು. ಅವರು ವಿಲ್‌ ಬರೆದಿಟ್ಟಂತೆಯೇ ಅವರ ಚಿತೆಗೆ ಜ್ಞಾನಯೋಗಾಶ್ರಮದಲ್ಲಿ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ವಿಜಯಪುರ ಮಾತ್ರವಲ್ಲದೇ ಇಡೀ ಕರುನಾಡು, ದೇಶ ವಿದೇಶದ ಭಕ್ತರು ಅವರ ಅಗಲಿಕೆಯಿಂದ ಶೂನ್ಯ ಭಾವದಿಂದ ಮರುಗುವಂತಾಗಿತ್ತು.
  • ಜೆಡಿಎಸ್​ ಪಂಚರತ್ನ ಯಾತ್ರೆ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಜೆಡಿಎಸ್‌ ಪಂಚರತ್ನ ರಥಯಾತ್ರೆ ನಡೆಯಿತು. ಇದೇ ವೇಳೆ ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಪಾಟೀಲ್‌ ಸೋಮಜ್ಯಾಳ ಅವರು ಹೃದಯಾಘಾತದಿಂದ (ಜ.21 ರಂದು) ಆಕಸ್ಮಿಕವಾಗಿ ನಿಧನ ಹೊಂದಿದ ದುರ್ಘಟನೆ ನಡೆದಿತ್ತು. ನಂತರದ ದಿನಗಳಲ್ಲಿ ಅವರ ಪತ್ನಿಗೆ ಸಿಂದಗಿ ಮತಕ್ಷೇತ್ರದಿಂದ ಟಿಕೆಟ್‌ ನೀಡಲಾಗಿತ್ತು.
  • ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : 2023ರ ಜನವರಿ 29ರಂದು ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆ ತನ್ನ ಮೂವರು ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಜಾಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಸ್ತಿ ಮಹಾದೇವ ನಗರದಲ್ಲಿ ನಡೆದಿತ್ತು. ಮೃತರನ್ನು ಗೀತಾ ರಾಮು ಚವ್ಹಾಣ (32), ಮಕ್ಕಳಾದ 6 ವರ್ಷದ ಮಗಳು, 4 ಮತ್ತು ಮೂರು ವರ್ಷದ ಇಬ್ಬರು ಗಂಡುಮಕ್ಕಳೆಂದು ಗುರುತಿಸಲಾಗಿತ್ತು.
  • ಬದಲಾದ ರಾಜಕೀಯ ಪರಿಸ್ಥಿತಿಯಿಂದ ವಿಜಯಪುರ ಜಿಲ್ಲೆಯ ಬಿಜೆಪಿಯ ಪ್ರಮುಖ ನಾಯಕರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಅವರು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು.‌ ಪ್ರಸಕ್ತ ವರ್ಷ ಬರಗಾಲ ವಿಜಯಪುರ, ಬಾಗಲಕೋಟಿ ಹಾಗೂ ಗದಗ ಜಿಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕ ಆವರಿಸಿದ್ದು, ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ.
  • ಹಾವೇರಿ ಜಿಲ್ಲೆಯ ವಿವಿಧ ಘಟನಾವಳಿಗಳು : ಹಾವೇರಿ ಜಿಲ್ಲೆ 2023ರಲ್ಲಿ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಪ್ರಥಮ ಬಾರಿಗೆ ಇಲ್ಲಿ ನಡೆದ ಸಾಹಿತ್ಯ ಸಮ್ಮೇಳನ ವಿಶ್ವದ ಗಮನ ಸೆಳೆಯಿತು. ಹಾವೇರಿ ಸಮೀಪದ ಆಲದಕಟ್ಟಿಯಲ್ಲಿ ನಡೆದ ಪಟಾಕಿ ದುರಂತದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡರು. ಹಾನಗಲ್ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಪಾಪಿ ಚಿಕ್ಕಪ್ಪನೊಬ್ಬ ತನ್ನ ಅತ್ತಿಗೆ ಮತ್ತು ಅಣ್ಣನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಘಟನೆ ನಡೆದಿತ್ತು.
  • ಸವಣೂರಿನ ಆನೆ ಹುಣಿಸಿಮರ ನೆಲಕ್ಕುರುಳಿತ್ತು. ಜಾಮೀನು ಸಿಕ್ಕ ನಂತರ ಹಾವೇರಿಯ ಹೊಸಮಠಕ್ಕೆ ಮುರುಘಾಶರಣರು ಆಗಮಿಸಿದ್ದರು.

ಇದನ್ನೂ ಓದಿ : ವರ್ಷದ ಮೆಲುಕು: ರಾಜ್ಯದ ಕರಾವಳಿಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.