ETV Bharat / state

ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಫೈಟ್: ಟೆಂಗಿನಕಾಯಿ ಸೇರಿ ಆಕಾಂಕ್ಷಿಗಳ ಹಾದಿ ಸುಗಮ

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಬಿಜೆಪಿ ತೊರೆಯುವ ನಿರ್ಧಾರ ಹಿನ್ನೆಲೆಯಲ್ಲಿ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಟಿ ಟಿಕೆಟ್​ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದು, ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Mahesh Tenginkai will get BJP ticket in Hubli Dharwad Central Constituency?
ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಫೈಟ್: ಮಹೇಶ್ ಟೆಂಗಿನಕಾಯಿ ಹಾದಿ ಸುಗಮ?
author img

By

Published : Apr 16, 2023, 1:04 PM IST

Updated : Apr 16, 2023, 1:39 PM IST

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್​ ಸಿಗದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಭಾನುವಾರ ಬಿಜೆಪಿಯಿಂದ ಹೊರ ಬಂದಿದ್ದಾರೆ. ಶೆಟ್ಟರ್​​ ಸತತವಾಗಿ ಆರು ಬಾರಿ ಜಯಭೇರಿ ಬಾರಿಸಿದ್ದರು. ಹೀಗಾಗಿ ಬಿಜೆಪಿಯಲ್ಲಿ ಇಷ್ಟು ವರ್ಷಗಳ ಕಾಲ ಶೆಟ್ಟರ್​​ ವಿರುದ್ಧ ಟಿಕೆಟ್​ಗಾಗಿ ಪೈಪೋಟಿ ಇರಲಿಲ್ಲ. ಆದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ನಿರಾಕರಣೆ ಮಾಡಿರುವುದರಿಂದ ಶೆಟ್ಟರ್​ ಬಂಡಾಯ ಎದ್ದು ಪಕ್ಷಕ್ಕೂ ರಾಜೀನಾಮೆ ನೀಡುವ ಬಗ್ಗೆ ಪ್ರಕಟಿಸಿದ್ದಾರೆ. ಆದ್ದರಿಂದ ಇದೀಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿದೆ.

ಇದನ್ನೂ ಓದಿ: ಶೆಟ್ಟರ್ ವಿರುದ್ಧ ಪಿತೂರಿ ನಡೆದಿಲ್ಲ, ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಿದ್ರೂ ಹೊರ ಹೋಗುತ್ತಿದ್ದಾರೆ : ಕಟೀಲ್

ಬಿಜೆಪಿಯಲ್ಲಿ ಶಾಸಕ, ಪ್ರತಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸೇರಿ ಪಕ್ಷ ಹಾಗೂ ಸರ್ಕಾರದ ಹಂತಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿರುವ ಅನುಭವ ಹೊಂದಿದ್ದು, ಏಕಾಏಕಿ ಟಿಕೆಟ್​ ನಿರಾಕರಣೆ ಮಾಡಿರುವುದು ಶೆಟ್ಟರ್​ ಅಸಮಾಧಾನಕ್ಕೆ ಕಾರಣವಾಗಿದೆ. ಎರಡು ತಿಂಗಳು ಮುಂಚೆಯೇ ಟಿಕೆಟ್​ ಬಗ್ಗೆ ಕುರಿತು ಹೇಳಿದ್ದರೆ ಗೌರವ ಇರುತ್ತಿತ್ತು. ರಾಜಕೀಯದಲ್ಲಿ ನಿವೃತ್ತಿಯಾದರೂ ಗೌರವಯುತವಾಗಿ ಆಗಬೇಕಿರಬೇಕೆಂದು ಅವರು ಹೇಳಿದ್ದರು. ಇದರ ನಂತರದಲ್ಲಿ ಅನೇಕ ಸಂಧಾನಗಳು ನಡೆದರೂ ಅದು ಸಫಲವಾಗಿಲ್ಲ. ಜೊತೆಗೆ ಬಿಜೆಪಿ ತೊರೆದರೂ ಸಹ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಶೆಟ್ಟರ್​​ ಘೋಷಿಸಿದ್ದಾರೆ.

ಮುಂದೆ ಬಿಜೆಪಿ ಟಿಕೆಟ್​ ಯಾರಿಗೆ?: ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕೆಂಬ ಶೆಟ್ಟರ್​ ತೀರ್ಮಾನದಿಂದ ಉಂಟಾದ ಬಿಕ್ಕಟ್ಟಿನ ಕಾರಣಕ್ಕೆ ಇದುವರೆಗೆ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ.​ ಈಗ ಶೆಟ್ಟರ್​ ಹೊರ ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಮುಂದಿನ ಬಿಜೆಪಿ ಟಿಕೆಟ್​​ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕಾರಣವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹಾಗೂ ಮುಖಂಡರಾದ ಮಹೇಶ ನಾಲವಾಡ, ಜಯತೀರ್ಥ ಕಟ್ಟಿ ಸೇರಿದಂತೆ ಹಲವು ನಾಯಕರು ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಎಲ್ಲಾ ಆಪ್ಶನ್​ ಓಪನ್​ ಇದಾವೆ.. ಕಾಂಗ್ರೆಸ್​ ಸೇರ್ತಿರಾ ಅಂತಾ ಕೇಳಿದ್ದಕ್ಕೆ ಶೆಟ್ಟರ್​ ಪ್ರತಿಕ್ರಿಯೆ

ಅದರಲ್ಲೂ, ಮಹೇಶ್ ಟೆಂಗಿನಕಾಯಿ ಹೆಸರು ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಮಹೇಶ್​ ಟೆಂಗಿನಕಾಯಿ‌ ಆಪ್ತರಾಗಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಯ ಸಭೆಯಲ್ಲಿ‌ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ, ಪ್ರಹ್ಲಾದ್​ ಜೋಶಿ ಮತ್ತು ರಮೇಶ್ ಜಾರಕಿಹೊಳಿ‌, ಗೋವಿಂದ ಕಾರಜೋಳ ಅವರ ನಡುವೆ ನಡೆದ ರಹಸ್ಯ ಸಭೆಯಲ್ಲೂ ಟೆಂಗಿನಕಾಯಿ ಭಾಗಿಯಾಗಿದ್ದು, ಕುತೂಹಲ ಮೂಡಿಸಿದೆ.

ಆದ್ದರಿಂದ ಸಿಎಂ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ‌ಮಹೇಶ್ ಟೆಂಗಿನಕಾಯಿ ಅವರಿಗೆ ಮುಂದಿನ ಟಿಕೆಟ್​ ಫಿಕ್ಸ್ ಆಯಿತಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಈ ಹಿಂದೆ ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆಯ ಚುನಾವಣಾ ಉಸ್ತುವಾರಿಗಳಾಗಿ ಮಹೇಶ್ ಟೆಂಗಿನಕಾಯಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂತಹ ಹಲವಾರು ಪ್ರಸಂಗಗಳನ್ನು ಪಕ್ಷ ಎದುರಿಸಿದೆ, ಡ್ಯಾಮೇಜ್​ ಕಂಟ್ರೋಲ್​ ಬಗ್ಗೆ ಚರ್ಚೆ ನಡೀತಿದೆ.. ಸಿಎಂ ಬೊಮ್ಮಾಯಿ

Last Updated : Apr 16, 2023, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.