ETV Bharat / state

ಬಕಾಸುರ ಮಿಡತೆಗಳ ಹಾವಳಿ ಆತಂಕ: ಧಾರವಾಡ ಕೃಷಿ ವಿವಿಯಲ್ಲಿ ವಾರ್ ರೂಮ್

ಮಿಡತೆಗಳ ವಿರುದ್ಧ ಹೋರಾಟಕ್ಕೆ ಧಾರವಾಡ ಕೃಷಿ ವಿವಿ ವಾರ್​ ರೂಮ್​ ಆರಂಭಿಸಿದೆ. ಇದು ಸಂಕಷ್ಟಕ್ಕೆ ಸಿಲುಕಬಹುದಾದ ರೈತರಿಗೆ ಅಗತ್ಯ ಸಲಹೆ ನೀಡಲಿದೆ.

author img

By

Published : May 31, 2020, 10:32 AM IST

Chancellor
ಡಾ. ಎಂ.ಬಿ. ಚೆಟ್ಟಿ, ಕೃಷಿ ವಿವಿ ಕುಲಪತಿ

ಧಾರವಾಡ: ರಾಕ್ಷಸ ರೂಪಿ ಮರುಭೂಮಿ ಮಿಡತೆಗಳು ಉತ್ತರ ಕರ್ನಾಟಕಕ್ಕೂ ಬರುತ್ತವೆ ಎಂಬ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮಿಡತೆಗಳ ವಿರುದ್ಧ ಹೋರಾಟಕ್ಕೆ ವಾರ್ ರೂಮ್ ನಿರ್ಮಾಣ ಮಾಡಲಾಗಿದೆ.

ಈ ಮಿಡತೆಗಳು ಮಹಾರಾಷ್ಟ್ರದ ಮೂಲಕವೇ ರಾಜ್ಯಕ್ಕೆ ಬರಲಿರುವ ಹಿನ್ನೆಲೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚಿನ ಆತಂಕ ಮನೆ ಮಾಡಿದೆ. ಹೀಗಾಗಿ ಈ ಭಾಗವನ್ನು ಪ್ರತಿನಿಧಿಸುವ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಕ್ಕೆ ಈ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯಿದ್ದು, ಅದನ್ನು ನಿಭಾಯಿಸುವುದಕ್ಕಾಗಿಯೇ ಕೃಷಿ ವಿವಿ ತನ್ನಲ್ಲಿ ಸದ್ಯ ಚಾಲ್ತಿಯಲ್ಲಿದ್ದ ಕೋವಿಡ್ 19 ಅಗ್ರಿ ವಾರ್ ರೂಮ್‌ ಅನ್ನೇ ಮಿಡತೆ ಹಾವಳಿ ವಿರುದ್ಧದ ವಾರ್ ರೂಮ್‌ ಆಗಿ ಪರಿವರ್ತಿಸಿಕೊಂಡಿದೆ.

ಕೃಷಿ ವಿವಿ ವ್ಯಾಪ್ತಿಯ ಏಳು ಜಿಲ್ಲೆ ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಿರುವ ಯಾವುದೇ ಜಿಲ್ಲೆಗೂ ಮಿಡತೆಗಳು ಪ್ರವೇಶ ಪಡೆದ ಕೆಲವೇ ಕ್ಷಣಗಳಲ್ಲಿ ಮಾಹಿತಿ ಸಿಗಬಹುದಾದ ವ್ಯವಸ್ಥೆಯೊಂದನ್ನು ಕೋವಿಡ್ 19 ಅಗ್ರಿ ವಾರ್ ರೂಮ್ ಸರಳವಾಗಿ ಒದಗಿಸಿಕೊಟ್ಟಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮಿಡತೆಗಳ ವಿರುದ್ಧ ಹೋರಾಟಕ್ಕೆ ವಾರ್ ರೂಮ್ ನಿರ್ಮಾಣ ಮಾಡಲಾಗಿದೆ.

ಯಾಕೆಂದರೆ ಕೊರೊನಾ ಲಾಕ್‌ಡೌನ್ ಜಾರಿಯಾದಾಗ ರೈತರ ತರಕಾರಿ, ಹಣ್ಣು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸಲು ಆಗದಿದ್ದಾಗ, ಕೃಷಿ ವಿವಿಯಲ್ಲಿ ಕೋವಿಡ್ 19 ಅಗ್ರಿ ವಾರ್ ರೂಮ್ ಸ್ಥಾಪಿಸಲಾಗಿತ್ತು. ಇದು ನಿರಂತರವಾಗಿ ರೈತರ ಸಂಪರ್ಕದಲ್ಲಿರುವ ಕಾರಣ, ಈಗ ಮಿಡತೆ ಹಾವಳಿ ತಡೆಗೂ ಇದೇ ವಾರ್ ರೂಮ್ ಸಹಾಯ ಪಡೆಯಲು ನಿರ್ಧರಿಸಲಾಗಿದೆ.

ಇನ್ನು ಈ ಮಿಡತೆಗಳು ಬೀದರ್ ಭಾಗದತ್ತ ಬಂದಿವೆ ಎನ್ನುವ ಮಾಹಿತಿ ಬರುತ್ತಿದ್ದಂತೆಯೇ ಕೃಷಿ ವಿವಿಯಲ್ಲಿನ ತಜ್ಞರು ಸೇರಿ, ತಮ್ಮಲ್ಲಿ ಸದ್ಯ ಚಾಲ್ತಿ ಇರುವ ಕೋವಿಡ್ ಅಗ್ರಿ ವಾರ್ ರೂಮ್‌ ಅನ್ನೇ ಮಿಡತೆಗಳ ವಿರುದ್ಧದ ಸಮರಕ್ಕೂ ಬಳಿಸಿಕೊಳ್ಳಲು ನಿರ್ಧರಿಸಿ ಸಂಬಂಧಿತ ಯೋಜನೆಯನ್ನು ಕಾರ್ಯೋನ್ಮುಖಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.