ETV Bharat / state

ಲಾಕ್​ಡೌನ್​​ ತಂದ ಆಪತ್ತು:  ಚಿತ್ರಮಂದಿರದ ಮಾಲೀಕರಿಗೂ ಕುತ್ತು - ಮಾರ್ಚ್​ 10 ರಿಂದ ಚಿತ್ರಮಂದಿರ ಬಂದ್

ಮಾರ್ಚ್​ 10 ರಿಂದ ಚಿತ್ರಮಂದಿರವನ್ನ ಬಂದ್ ಮಾಡಿದ್ದು, ಇದೀಗ ಮೂರು ತಿಂಗಳು ಕಳೆದಿವೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ್ಧೇವೆ ಎಂದು ಜಿಲ್ಲೆಯ ಶ್ರೀನಿವಾಸ ಪದ್ಮ ಚಿತ್ರಮಂದಿರದ ಮಾಲೀಕ ಕಾರ್ತಿಕ ಕುಲಕರ್ಣಿ ನೋವು ತೋಡಿಕೊಂಡರು.

lockdown effect on film talkies at Dharwada
ಚಿತ್ರಮಂದಿರ
author img

By

Published : Jun 5, 2020, 1:49 PM IST

ಧಾರವಾಡ: ಲಾಕ್​ಡೌನ್​​ ಅವಧಿಯಲ್ಲಿ ದೇಶಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ಕುಂಠಿತಗೊಂಡಿದ್ದಲ್ಲದೇ ಮನೋರಂಜನೆ ತಾಣವಾದ ಚಿತ್ರಮಂದಿರಕ್ಕೂ ಇದರ ಪ್ರಭಾವ ತೀವ್ರವಾಗಿಯೇ ಇದೆ. ಪರಿಣಾಮ ಇದನ್ನೇ ನಂಬಿಕೊಂಡಿದ್ದ ಚಿತ್ರಮಂದಿರದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾರ್ಚ್​ 10 ರಿಂದ ಚಿತ್ರಮಂದಿರವನ್ನ ಬಂದ್ ಮಾಡಿದ್ದು, ಇದೀಗ ಮೂರು ತಿಂಗಳು ಕಳೆದಿವೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ್ಧೇವೆ ಎಂದು ಜಿಲ್ಲೆಯ ಶ್ರೀನಿವಾಸ ಪದ್ಮ ಚಿತ್ರಮಂದಿರದ ಮಾಲೀಕ ಕಾರ್ತಿಕ ಕುಲಕರ್ಣಿ ನೋವು ತೋಡಿಕೊಂಡರು.

ಕಾರ್ತಿಕ್​ ಕುಲಕರ್ಣಿ

ನಂತರ ಮಾತನಾಡಿದ ಅವರು, ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಿದ್ದು, ಸಿಬ್ಬಂದಿಗೆ ವೇತನ ನೀಡುವುದಕ್ಕೂ ನಮ್ಮಲ್ಲಿ ಹಣ ಇಲ್ಲದಂತಾಗಿದೆ. ಅಲ್ಲದೇ ಬ್ಯಾಂಕ್​ನಿಂದ ಸಾಲ ಸಹ ನೀಡುತ್ತಿಲ್ಲ. ಈ ತಿಂಗಳಿನಿಂದ ನಮ್ಮ ಪರ್ಸನಲ್ ಖಾತೆಯಿಂದ ಸಿಬ್ಬಂದಿಗೆ ವೇತನ ನೀಡುತ್ತಿದ್ದೇವೆ. ಶ್ರೀಮಂತರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಬಡವರಿಗೆ ಸರ್ಕಾರ ಸಹಾಯ ಮಾಡುತ್ತದೆ. ಆದರೆ, ಮಧ್ಯಮ ವರ್ಗದವರು ಲಾಕ್​ಡೌನ್​ನಿಂದ ಒದ್ದಾಡುವಂತಾಗಿದೆ ಎಂದು ತಮ್ಮ ಅಳಲು ಹಂಚಿಕೊಂಡರು.

ಸಿಬ್ಬಂದಿಗೆ ಪೂರ್ಣ ಪ್ರಮಾಣದ ವೇತನ ನೀಡಿ ಎಂದು ಸರ್ಕಾರ ಹೇಳುತ್ತಿದೆ. ಅದಕ್ಕೆ ಸರ್ಕಾರವೇ ಶೇ 50ರಷ್ಟು ಸಹಾಯ ಮಾಡಬೇಕು‌‌. ಚಿತ್ರಮಂದಿರ ಬಂದ್ ಆಗಿ ಮೂರು ತಿಂಗಳು ಕಳೆದರೂ ಪ್ರಾರಂಭ ಮಾಡುವ ಒಂದೇ ಒಂದು ಮಾತು ಸಹ ಸರ್ಕಾರ ಆಡುತ್ತಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.