ETV Bharat / state

ಬೇರೆಯವರಿಗೆ ನನ್ನ ಹೋಲಿಸಬೇಡಿ, ನಾನು ಸ್ವಲ್ಪ ಭಾವನಾತ್ಮಕ ರಾಜಕಾರಣಿ: ಹೆಚ್​.ಡಿ.ಕೆ - HD kumaraswamy statement

ಪ್ರಸ್ತುತ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಕೇಳಿದರೆ ಕೆಲ ನಾಯೊಕರು ಖಜಾನೆ ಖಾಲಿಯಾಗಿದೆ ಎನ್ನುತ್ತಾರೆ, ಇನ್ನು ಕೆಲವರು ಸಾಕಷ್ಟು ಹಣ ಇದೆ ಎನ್ನುತ್ತಾರೆ. ಆದ್ದರಿಂದ ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೆಚ್​​.ಡಿ.ಕುಮಾರಸ್ವಾಮಿ ಸುದ್ಧಿಗೋಷ್ಠಿ
author img

By

Published : Oct 28, 2019, 2:22 PM IST

ಹುಬ್ಬಳ್ಳಿ: ಸರ್ಕಾರ ನೆರೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ, ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಅದನ್ನು ಬಿಟ್ಟು ಕೆಲವರು ಸರ್ಕಾರದಲ್ಲಿ ಹಣವಿದೆ ಎಂದರೆ ಇನ್ನು ಕೆಲವರು ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಬೆಳೆಹಾನಿ, ಮನೆ ಹಾನಿ ಆಗಿವೆ. ಇದರಿಂದಾಗಿ ದೊಡ್ಡ ಮಟ್ಟದ ನಿರಾಶ್ರಿತರ ಸಂಖ್ಯೆ ಇದೆ. ಈ ಸಮಯದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದರ ಬದಲು ಅವರಿಗೆ ಕೆಲ ಸಮಯ ನೀಡಬೇಕು ಎಂದರು.

ಹೆಚ್​​.ಡಿ.ಕುಮಾರಸ್ವಾಮಿ ಸುದ್ಧಿಗೋಷ್ಠಿ
ಡಿ.5 ರಂದು ಉಪಚುನಾವಣೆ ಎಂದು ಮಾಹಿತಿ ಬಂದಿದೆ. ಆ ಸಮಯದಲ್ಲಿ ಯಾರೇ ಗೆದ್ದು, ಸರ್ಕಾರ ಯಾವುದೇ ಬಂದರೂ, ಮುಖ್ಯಮಂತ್ರಿ ಯಾರೇ ಆದರೂ ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಬೇಕು. ಅಂತವರಿಗೆ ನನ್ನ ಸಂಪೂರ್ಣ ಬೆಂಬಲ ಕೊಡುತ್ತೇನೆ ಎಂದಿದ್ದಾರೆ.

ನಾನು ಯಾವುದೇ ಕೇಸ್ ನಲ್ಲಿ ಸಿಲುಕಿಕೊಳ್ಳುತ್ತೇನೆ ಎಂದು ಹೆದರಿ ಈ ಕೆಲಸ ಮಾಡುತ್ತಿಲ್ಲ. ನನಗೆ ಜನರ ಸಂಕಷ್ಟ ಪರಿಹಾರ ಆಗಬೇಕು. ಅಲ್ಲದೆ ನಾನು ಯಾರ ಮುಂದೆಯೂ ಭಿಕ್ಷೆ ಕೇಳುವುದಿಲ್ಲ. ಫೋನ್ ಟ್ಯಾಪಿಂಗ್, ಐಎಮ್ ಎ ಯಾವುದೇ ತನಿಖೆ ಮಾಡಲಿ ನಾನು ಸಿದ್ದ, ಅಲ್ಲದೆ ಐಎಮ್ ಎ ಮತ್ತು ನನಗೂ ಯಾವುದೇ ಸಂಬಂಧವಿಲ್ಲ ಎಂದರು.‌

ನನಗೆ ಅನ್ಯ ರಾಜಕಾರಣಿಗಳ‌ ಜೊತೆಗೆ ಹೋಲಿಸಬೇಡಿ. ನಾನೇ ಬೇರೆ, ಭಾವನಾತ್ಮಕ ರಾಜಕಾರಣಿ, ಸ್ವಲ್ಪ ಮಟ್ಟಿಗೆ ಮಾನವೀಯತೆ ಇಟ್ಟುಕೊಂಡಿರುವ ರಾಜಕಾರಣಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಆದರೆ ನನ್ನ ನಂಬಿದ ಬಡ ಜನರಿಗಾಗಿ ಮತ್ತೆ ರಾಜಕಾರಣದಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ ಎಂದರು.

Intro:ಹುಬ್ಬಳ್ಳಿ-02

ಸರ್ಕಾರ ನೆರೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ, ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಕೆಲವರು ಸರ್ಕಾರದಲ್ಲಿ ಹಣವಿದೆ ಎಂದರೆ ಇನ್ನೂ ಕೆಲವರು ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಬೆಳೆಹಾನಿ, ಮನೆ ಹಾನಿ ಆಗಿವೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ನಿರಾಶ್ರಿತರ ಸಂಖ್ಯೆ ಇದೆ. ಈ ಸಮಯದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದಿಲ್ಲ‌. ಬದಲಾಗಿ ಅವರಿಗೆ ಕೆಲ ಸಮಯ ನೀಡಬೇಕು. ಇನ್ನೂ ಸರ್ಕಾರದ ಖಜಾನೆ ಕೆಲ ಸಚಿವರು ಖಾಲಿ ಆಗಿದೆ ಎಂದು ಹೇಳಿಕೆ ನೀಡುತ್ತಿದ್ದರೇ, ಮತ್ತೆ ಕೆಲವರು ಇಲ್ಲಾ ಖಜಾನೆಯಲ್ಲಿ ಬೇಕಾಗುವಷ್ಟು ಹಣವಿದೆ ಎಂದು ಹೇಳುತ್ತಾರೆ. ಅಲ್ಲದೇ ಸಿಎಂ ಬಿಎಸ್ ವೈ ಕೂಡಾ ಸರ್ಕಾರದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ಹೇಳುವ ಅವರು ಮತ್ತೆ ಕೆಲವು ಕಡೆ ಇಲ್ಲಾ ಅಂತಾರೆ ಇದರಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ನಿಜವಾಗಿಯೂ ನಿರಾಶ್ರಿತರಿಗೆ ಸಹಾಯ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಜನರಿಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

ಡಿ.5 ರಂದು ಉಪಚುನಾವಣೆ ಎಂದು ಮಾಹಿತಿ ಬಂದಿದ್ದು, ಆ ಸಮಯದಲ್ಲಿ ಯಾರೇ ಗೆದ್ದು ಸರ್ಕಾರ ಯಾವುದೇ ಬಂದರು. ಮುಖ್ಯಮಂತ್ರಿ ಯಾರೇ ಆದರು ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಬೇಕು. ಅಂತವರಿಗೆ ನನ್ನ ಸಂಪೂರ್ಣ ಶಕ್ತಿಯನ್ನು ಕೊಡುತ್ತೇನೆ. ನಾನು ಯಾವುದೇ ಕೇಸ್ ನಲ್ಲಿ ಸಿಲುಕಿಕೊಳ್ಳುತ್ತೇನೆ ಎಂದು ಹೆದರಿ ಈ ಕೆಲಸ ಮಾಡುತ್ತಿಲ್ಲ. ನನಗೆ ಜನರ ಸಂಕಷ್ಟ ಪರಿಹಾರ ಆಗಬೇಕು. ಅಲ್ಲದೇ ನಾನು ಯಾರ ಮುಂದೆ ಭಿಕ್ಷೆ ಕೇಳಲ್ಲಾ. ಫೋನ್ ಟ್ಯಾಪಿಂಗ್, ಐಎಮ್ ಎ ಯಾವುದೇ ಖನಿಖೆ ಮಾಡಲಿ ನಾನು ಸಿದ್ದ, ಅಲ್ಲದೇ ಐಎಮ್ ಎ ನನಗೂ ಯಾವುದೇ ಸಂಬಂಧವಿಲ್ಲ ಎಂದರು.‌

ನೆರೆ ಪರಿಹಾರ ವಿಚಾರವಾಗಿ ಶಾಶ್ವತ ಪರಿಹಾರ ಮಾಡಬೇಕು ಎಂದು ಹೇಳುವುದು ಜೊತೆಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು ಒಂದು ಲಕ್ಷ ಮತ್ತು ಐದು‌ ಲಕ್ಷ ಕೊಡತ್ತೇನೆ ಎಂದು ಹೇಳುವುದು ದುಡ್ಡು ಹೊಡೆಯುವ ಕೆಲಸವಾಗಿದೆ.‌ಆ ರೀತಿ ಮಾಡಬಾರದು ಕೊಡಗಿನಲ್ಲಿ ನೆರೆ ಬಂದಾಗ ನಾವು ತೆಗೆದುಕೊಂಡ ಕ್ರಮ ಅನುಸರಿಸಿ ವಸತಿ ಸೌಲಭ್ಯ ಒದಗಿಸಬೇಕು. ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು. ಅದಕ್ಕಾಗಿ ಸರಿಯಾದ ಯೋಜನೆ ರೂಪಿಸಬೇಕು. ಈ ಸಮಯದಲ್ಲಿ ರಾಜಕೀಯ ಮಾಡದೇ ಮೂರು ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚಿಸಲು ಸಿಎಂ ಭೇಟಿಗೆ ಸಮಯ‌ ಕೇಳುತ್ತೇನೆ. ನೊಂದ ಜನರಿಗಾಗಿ ಕೆಳಗೆ ಇಳಿಯಲು ನಾನು ಸಿದ್ದ ಎಂದರು.

ನನಗೆ ಅನ್ಯ ರಾಜಕಾರಣಿಗಳ‌ ಜೊತೆಗೆ ಹೋಲಿಸಬೇಡಿ ನಾನೇ ಬೇರೆ, ಭಾವನಾತ್ಮಕ ರಾಜಕಾರಣಿ, ಸ್ವಲ್ಪ ಮಟ್ಟಿಗೆ ಮಾನವೀಯತೆ ಇಟ್ಟುಕೊಂಡಿರುವ ರಾಜಕಾರಣಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಆದರೆ ನನ್ನ ನಂಬಿದ ಬಡ ಜನರಿಗಾಗಿ ಮತ್ತೆ ರಾಜಕಾರಣದಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ ಎಂದರು.

ಬೈಟ್- ಹೆಚ್ ಡಿ‌ ಕುಮಾರಸ್ವಾಮಿ, ಮಾಜಿ‌ ಸಿಎಂBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.