ETV Bharat / state

ಮಹಿಳಾ ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಧಾರವಾಡದಲ್ಲಿ ಸಿಪಿಐ ವಿರುದ್ಧ ಪ್ರತಿಭಟನೆ - ಸಿಪಿಐ ಮಂಜುನಾಥ ಕುಸುಗಲ್

ಧಾರವಾಡ ಗ್ರಾಮೀಣ ಪೊಲೀಸ್​ ಠಾಣೆ ಸಿಪಿಐ ಮಂಜುನಾಥ ಕುಸುಗಲ್ ವಿರುದ್ಧ ಜುಬಲಿ ವೃತ್ತದ ಬಳಿ ವಕೀಲರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

lawyers protest against cpi at dharwad
ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ
author img

By

Published : Oct 31, 2022, 5:34 PM IST

Updated : Oct 31, 2022, 6:22 PM IST

ಧಾರವಾಡ: ಮಹಿಳಾ ವಕೀಲರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಧಾರವಾಡ ಗ್ರಾಮೀಣ ಪೊಲೀಸ್​ ಠಾಣೆ ಸಿಪಿಐ ಮಂಜುನಾಥ ಕುಸುಗಲ್ ವಿರುದ್ಧ ಜುಬಲಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಜುಬಲಿ ವೃತ್ತದ ಬಳಿ ಜಮಾಯಿಸಿದ ವಕೀಲರು, ವಾಹನ ಸಂಚಾರ ಸಂಪೂರ್ಣ ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.​ ಗ್ರಾಮೀಣ ಠಾಣೆಗೆ ಮಾಹಿತಿ ಕೇಳಲು ಹೋದಾಗ ಪೊಲೀಸ್ ಅಧಿಕಾರಿ ವಕೀಲರಿಗೆ ನಿಂದಿಸಿದ್ದಾರೆಂದು ದೂರಿ, ಸಿಪಿಐ ಮಂಜುನಾಥ ಕುಸುಗಲ್ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ

ಇದನ್ನೂ ಓದಿ: ಶಾಸಕಾಂಗಕ್ಕಿಂತ ನ್ಯಾಯಾಂಗ ಶ್ರೇಷ್ಠ: ಮತ್ತೊಮ್ಮೆ ಸರಳತೆ ಮೆರೆದ ಸಿಎಂ ಬೊಮ್ಮಾಯಿ

ವಾಹನ ಸಂಚಾರ ಸ್ಥಗಿತವಾಗಿದ್ದ ವೇಳೆ ಬೈಕ್ ಸವಾರನೊಬ್ಬ ಮುಂದೆ ಹೋಗಲು ಯತ್ನಿಸಿದ್ದು, ಈ ವೇಳೆ ವಕೀಲರು ಆತನನ್ನು ತಡೆದರು. ಬಳಿಕ ದ್ವಿಚಕ್ರ ವಾಹನ ಸವಾರ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು.

Last Updated : Oct 31, 2022, 6:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.