ಹುಬ್ಬಳ್ಳಿ: ಲೋನ್ ಕೊಡಿಸುತ್ತೇನೆ ಎಂದು ಹೇಳಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಹಣವನ್ನು ಪಡೆದು ಸುಮಾರು ಮೂವತ್ತಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದ್ದು, ಈ ಸಂಬಂಧ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಶ್ರೀರಾಮ ನಗರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ದೊಡ್ಡ ದೊಡ್ಡ ರಾಜಕೀಯ ಮುಖಂಡರ ಹೆಸರನ್ನು ಹೇಳಿಕೊಂಡ ವಿವಿಧ ರೀತಿಯ ಲೋನ್ ಕೊಡಿಸುತ್ತೇನೆ ಎಂದು ಹೇಳಿ ಜನರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾಳೆ ಎಂದು ನೊಂದ ಜನರು ಆರೋಪಿಸಿದ್ದಾರೆ.
ನಗರದಲ್ಲಿ ಅದೆಷ್ಟೋ ಮಹಿಳೆಯರು, ಮನೆಗಲಸ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮನೆಗೆ ಅನುಕೂಲವಾಗಲಿ ಎಂಬ ಆಸೆಯಿಂದ ಕೂಡಿಟ್ಟಿದ್ದ ಹಣವನ್ನೆಲ್ಲ ಮಹಿಳೆಗೆ ನೀಡಿದ್ದಾರೆ. ಅದರಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಹಿಳೆಯಿಂದ ಹಣ ಕೊಟ್ಟಿದ್ದಾರೆ. ಆದರೆ, ಇತ್ತ ಲೋನ್ ಇಲ್ಲದೇ, ಕೊಟ್ಟ ಹಣವೂ ಇಲ್ಲದೆ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಓದಿ: ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್-ಕಾಂಗ್ರೆಸ್ ಪಾಲು:ಮೇಯರ್ ಆಗಿ ರುಕ್ಮಿಣಿ ಮಾದೇಗೌಡ
ಕಾಂಗ್ರೆಸ್ ಮುಖಂಡೆ ಎಂದು ಹೇಳಿಕೊಂಡಿರುವ ಮಹಿಳೆ ಅನೇಕ ಜನರಿಂದ ಹಣ ಪಡೆದು ಮೋಸ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಹಣ ಕೇಳುಲು ಹೋದರೆ ಯಾಮಾರಿಸುತ್ತಲೇ ಬಂದಿದ್ದಾಳಂತೆ. ಇದರಿಂದ ಮೋಸ ಹೋದವರು ಎಮ್ಎಲ್ಎ ಹೆಸರನ್ನು ದುರ್ಬಳಕೆ ಮಾಡಿಕೊಂಡ ಈಕೆಗೆ ತಕ್ಕ ಶಿಕ್ಷೆ ಆಗಬೇಕೆಂದು ಮಾಧ್ಯಮದ ಮೂಲಕ ಒತ್ತಾಯಿಸಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.