ETV Bharat / state

ಗ್ರಾಮೀಣಾಭಿವೃದ್ಧಿಗೆ ಹಾರಿಕೆ ಉತ್ತರ ನೀಡುವ ಸರ್ಕಾರ: ಸಂದಾಯವಾಗದ ಅನುದಾನ - ETV Bharath Kannada

ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಬೊಮ್ಮಾಯಿ ಸರ್ಕಾರ ಹಿಂದೆ ಎಂಬುದಕ್ಕೆ ತ್ರೈಮಾಸಿಕ ಅನುದಾನ ಬಿಡುಗಡೆಯ ಸಾಧಯೇ ಸಾಕಾಗಿತ್ತು. ಉತ್ತರ ಕರ್ನಾಟಕ ಅಭಿವೃದ್ಧಿ ಕೇಂದ್ರ ಎಂದು ಕರೆಯಲಾಗುತ್ತಿರುವ ಧಾರವಾಡ ಗ್ರಾಮ ಪಂಚಾಯತ್​ನಲ್ಲಿ ಅನುದಾನದ ಕೊರತೆ ಉಂಟಾಗಿದೆ.

lack-of-grant-in-dharwad-gram-panchayat
ಸಂದಾಯವಾಗದ ಅನುದಾನ
author img

By

Published : Dec 9, 2022, 1:21 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 144 ಗ್ರಾಮ ಪಂಚಾಯತಿಗಳಿದ್ದು, ಸರ್ಕಾರದಿಂದ ಒಂದೊಂದು ಪಂಚಾಯತಿಗೆ 70-80 ಲಕ್ಷ ಕಾಮಗಾರಿ ಬಿಲ್ ಬಾಕಿ ಇದೆ. ಅಲ್ಲದೇ ಆರು ತಿಂಗಳು ಕಳೆದರೂ ಕೂಲಿ ಕಾರ್ಮಿಕರಿಗೆ ವೇತನ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿ ಮಾಡುವುದಾದರೂ ಹೇಗೆ ಎಂಬುವಂತ ಯಕ್ಷ ಪ್ರಶ್ನೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳನ್ನು ಕಾಡುತ್ತಿದೆ.

ಇನ್ನೂ ಸುಮಾರು 250 ಕೋಟಿ ಕಾಮಗಾರಿ ಹಣ ಸರ್ಕಾರದಿಂದ ಬಾಕಿ ಉಳಿದಿದೆ. ಅಲ್ಲದೇ ಚುನಾಯಿತ ಪ್ರತಿನಿಧಿಗಳಿಗೆ ಬರಬೇಕಿರುವ ಗೌರವ ಧನ ಬಾರದೇ ಇರುವ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಿಂದ ದೂರ ಉಳಿಯುವಂತಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕೆ ಕೂಡ ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಂತಾಗಿದೆ.

ಗ್ರಾಮೀಣಾಭಿವೃದ್ಧಿಗೆ ಹಾರಿಕೆ ಉತ್ತರ ನೀಡುವ ಸರ್ಕಾರ

ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಅನುದಾನ ಸಂದಾಯವಾಗದೇ ಇರುವ ಹಿನ್ನೆಲೆಯಲ್ಲಿ ಜನರು ಅಭಿವೃದ್ಧಿಯಿಂದ ವಂಚಿತವಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಮುತುವರ್ಜಿಯಿಂದ ಸರಿಯಾದ ಅನುದಾನ ಬಿಡುಗಡೆ ಮಾಡಿ ಗ್ರಾಮೀಣ ಅಭಿವೃದ್ಧಿಗೆ ಕೈ ಜೋಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಇದನ್ನೂ ಓದಿ: ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: ಸದಸ್ಯರನ್ನು 40 ದಿನ ರೆಸಾರ್ಟ್​ನಲ್ಲಿರಿಸಿ ವಿಮಾನದಲ್ಲಿ ಕರೆತಂದ ಅರ್ಚಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.