ಧಾರವಾಡ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಚಿತವಾಗಿಯೇ ನಾವು 408 ಖಾಸಗಿ ವಾಹನ ಗುರುತಿಸಿದ್ವಿ. ಆ ವಾಹನಗಳ ಮೂಲಕ ಸೇವೆ ನೀಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದವರಿಗೂ ತಾತ್ಕಾಲಿಕ ಪರ್ಮಿಟ್ ನೀಡಿದ್ದೇವೆ. ಧಾರವಾಡ-ಹುಬ್ಬಳ್ಳಿಯಲ್ಲಿ ಖಾಸಗಿ ವಾಹನ ರಸ್ತೆಗಿಳಿಸಿದ್ದೆವು.
ಬಸ್ ನಿಲ್ದಾಣದಲ್ಲಿ ಕರೆಯಿಸಿ ವ್ಯವಸ್ಥೆ ಮಾಡಿದ್ದೇವೆ. ಶೇ.20ರಷ್ಟು ಕೆಎಸ್ಆರ್ಟಿಸಿ ನೌಕರರೂ ನಮ್ಮಲ್ಲಿ ಕೆಲಸ ಮಾಡಿದ್ದಾರೆ. ರಾತ್ರಿ ಪಾಳೆಗೆ ಬಂದಿದ್ದವರು ಇಂದು ಮಧ್ಯಾಹ್ನದವರೆಗೂ ಕರ್ತವ್ಯದಲ್ಲಿದ್ದರು. ಸ್ಕೂಲ್ ಬಸ್ ಮತ್ತು ಮ್ಯಾಕ್ಸಿಕ್ಯಾಬ್ ಸಹ ಸೇವೆ ನೀಡಿವೆ.
ರಾಜ್ಯ ಜಲ ಶಕ್ತಿ ಅಭಿಯಾನಕ್ಕೆ ಏಪ್ರಿಲ್ 9ರಂದು ಚಾಲನೆ ನೀಡಲಾಗುವುದು. ಮೂರು ತಿಂಗಳು ಇಡೀ ರಾಜ್ಯಾದ್ಯಂತ ಅಭಿಯಾನ ನಡೆಯಲಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದರು.