ETV Bharat / state

ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಕಂದಕಕ್ಕೆ ಇಳಿದ ಸಾರಿಗೆ ಬಸ್​ - KSRTC Bus overturned In Hubballi

ಎದುರಿಗೆ ಬಂದ್ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನುತಪ್ಪಿಸಲು ಹೋಗಿ ಧಾರವಾಡದಿಂದ ರೋಣಕ್ಕೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಇಳಿದಿದೆ. ಪರಿಣಾಮ ಬಸ್ ಚಾಲಕ ಸೇರಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ..

KSRTC Bus overturned In Hubballi
KSRTC Bus overturned In Hubballi
author img

By

Published : Jan 25, 2022, 12:13 PM IST

ಧಾರವಾಡ (ಹುಬ್ಬಳ್ಳಿ) : ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾರಿಗೆ ಬಸ್‌ವೊಂದು ರಸ್ತೆ ಪಕ್ಕದ ಕಂದಕಕ್ಕೆ ಇಳಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಗೊಪ್ಪ ಬಳಿ ಈ ಘಟನೆ ನಡೆದಿದೆ.

ಕಂದಕಕ್ಕೆ ಇಳಿದ ಸಾರಿಗೆ ಬಸ್​

ಇದನ್ನೂ ಓದಿ: ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೋಣ ಡಿಪೋದ ಬಸ್ ಧಾರವಾಡದಿಂದ ರೋಣ ಕಡೆಗೆ ತೆರಳುತ್ತಿತ್ತು. ಈ ವೇಳೆ ನವಲಗುಂದ ಪಟ್ಟಣ ಹೊರ ವಲಯದ ಕುಮಾರಗೊಪ್ಪ ಕ್ರಾಸ್ ಬಳಿಯ ಧಾರವಾಡ ಕೆರೆ ಎದುರು ಬೈಕ್ ಏಕಾಏಕಿ ಬಂದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಇಳಿದಿದೆ.

KSRTC Bus overturned In Hubballi
ಕಂದಕಕ್ಕೆ ಇಳಿದ ಸಾರಿಗೆ ಬಸ್​

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಚಾಲಕ ಹಾಗೂ ನಿರ್ವಾಹಕ ಸೇರಿದಂತೆ 15ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.