ETV Bharat / state

ರಾಜ್ಯದಲ್ಲಿ ಭಾರಿ ಮಳೆ, ಜಲಪ್ರಳಯ ಆಗುವ ಲಕ್ಷಣ ಇದೆ: ಕೋಡಿಮಠ ಶ್ರೀ ಭವಿಷ್ಯ

ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತದೆ, ಜಲಪ್ರಳಯ ಆಗುವ ಲಕ್ಷಣಗಳು ಇವೆ. ಜಾಗತಿಕ ಮಟ್ಟದಲ್ಲಿ ದುರಂತ ನಡೆಯಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ.

kodimath-sri-predictions-on-heavy-rain-and-flood-in-karnataka
ರಾಜ್ಯದಲ್ಲಿ ಭಾರೀ ಮಳೆ, ಜಲಪ್ರಳಯ ಆಗುವ ಲಕ್ಷಣ ಇದೆ : ಕೋಡಿಮಠ ಶ್ರೀ ಭವಿಷ್ಯ
author img

By

Published : Jul 1, 2023, 4:18 PM IST

Updated : Jul 1, 2023, 5:27 PM IST

ರಾಜ್ಯದಲ್ಲಿ ಭಾರಿ ಮಳೆ, ಜಲಪ್ರಳಯ ಆಗುವ ಲಕ್ಷಣ ಇದೆ: ಕೋಡಿಮಠ ಶ್ರೀ ಭವಿಷ್ಯ

ಹುಬ್ಬಳ್ಳಿ : ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ. ಜೊತೆಗೆ ಜಲಪ್ರಳಯ ಆಗುವ ಲಕ್ಷಣ ಇದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಒಂದು ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಅದರಂತೆ ಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ ಎಂದು ಹೇಳಿದರು.

ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ ಮೃತ್ಯುವಿಗೆ ಸಿಲುಕುವ ಸೂಚನೆ ಇದೆ. ವಿಜಯ ದಶಮಿಯಿಂದ ಸಂಕ್ರಾಂತಿಯವರೆಗೆ ಈ ದುರ್ಘಟನೆಗಳು ನಡೆಯುತ್ತವೆ ಎಂದು ಶ್ರೀಗಳು ಹೇಳಿದರು. ಆಳುವವರು ಈಗಾಗಲೇ ಮುಂದಾಗುವ ಗಂಡಾಂತರ ಅರಿತರೇ ಪಾರಾಗಬಹುದು. ಇಲ್ಲದೇ ಹೋದಲ್ಲಿ ದುರ್ಘಟನೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.

ಕರುನಾಡಿಗೆ ಕೆಲವೊಂದು ಆಪತ್ತು ಇದೆ.‌ ಕೆಲವು ಸಾವು ನೋವುಗಳು ಸಂಭವಿಸುತ್ತದೆ. ಈ ವೇಳೆ ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ಒಂದು ದುರ್ಘಟನೆ ಆಗುತ್ತದೆ. ಅದನ್ನು ತಪ್ಪಿಸುವುದು ಆಳುವವರ ಕೈಯಲ್ಲಿದೆ. ಇದರಿಂದ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದ ಮಳೆ ಬೆಳೆ ವಿಚಾರ : ರಾಜ್ಯದ ಮಳೆ ಬೆಳೆ ವಿಚಾರವಾಗಿ ಮಾತನಾಡಿರುವ ಶ್ರೀಗಳು," ಸಾಕಷ್ಟು ಮಳೆಯಾಗುತ್ತದೆ. ಮುಂದೆ ಜಲಪ್ರಳಯ ಪ್ರಳಯವಾಗುವ ಲಕ್ಷಣ ಇದೆ. ಹೆಚ್ಚೇನೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಜಾಗತಿಕ ಮಟ್ಟದ ದುರಂತ : ಪ್ರಮುಖವಾಗಿ ಮೂರು ದುರಂತಗಳು ನಡೆಯುತ್ತವೆ. ಒಂದು ಜಾಗತಿಕ ಮಟ್ಟದ ದುರಂತ ಸಂಭವಿಸಲಿದೆ. ವಿಪರೀತ ಮಳೆಯಿಂದಾಗಿ ಜಲ ಪ್ರಳಯ ಉಂಟಾಗುತ್ತದೆ. ಇದರಿಂದಾಗಿ ಎರಡು ಮೂರು ದೇಶಗಳು ಮುಚ್ಚಿ ಹೋಗುವ ಸಾಧ್ಯತೆಗಳಿವೆ". "ಎಲ್ಲೋ ನಡೆದ ಘಟನೆಯಿಂದ ಉಂಟಾದ ವಾಯು ಮಾಲಿನ್ಯದಿಂದ ದೇಶದ ಜನರು ಅಪಮೃತ್ಯುಗೊಳಗಾಗುವ ಸನ್ನಿವೇಶ ಇದೆ. ಬೇರೆಡೆ ಸಂಭವಿಸುವ ಬಾಂಬ್​ ಸ್ಫೋಟದಂತಹ ದುರಂತದಿಂದ ಉಂಟಾದ ಮಲಿನ ಗಾಳಿಯು ಭಾರತದತ್ತ ಬೀಸಿ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು".

ರಾಷ್ಟ್ರೀಯ ಮಟ್ಟದ ದುರಂತ : "ರಾಷ್ಟ್ರೀಯ ಮಟ್ಟದ ತೊಂದರೆ ಎಂದರೆ, ವಿಜಯ ದಶಮಿಯಿಂದ ಸಂಕ್ರಾತಿವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ದುರ್ಘಟನೆ ನಡೆಯುತ್ತದೆ. ಆಳುವವರು ಈ ಬಗ್ಗೆ ಎಚ್ಚೆತ್ತರೆ ಈ ಅಪಾಯವನ್ನು ತಪ್ಪಿಕೊಳ್ಳಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಮೂರನೇಯದಾಗಿ ಈ ಕರುನಾಡಿಗೆ ಕೆಲವು ಆಪತ್ತಿದೆ. ಬಹಳ ಕಷ್ಟದಾಯಕವಾದ ಆಪತ್ತು ಇದಲ್ಲ. ಕೆಲವು ಸಾವು ನೋವುಗಳು ಸಂಭವಿಸುತ್ತದೆ. ದೈವಕೃಪೆಯಿಂದ ಎಲ್ಲ ಕಷ್ಟಗಳು ದೂರವಾಗುತ್ತದೆ" ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ವಿಚಾರವಾಗಿ ಮಾತನಾಡಿದ ಅವರು, ಬಡವರಿಗೆ ಗ್ಯಾರಂಟಿ ಒಳ್ಳೆಯದು. ಯಾವ ಹೆಣ್ಣಿಗೆ ಸ್ವತಂತ್ರ ಇರಲಿಲ್ಲ. ಅಂತಹ ಹೆಣ್ಣುಮಕ್ಕಳು ಇದೀಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರವಾಗಿ ಮಾತನಾಡಿ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ : ಪದೇಪದೆ ಕಳವಾಗುತ್ತಿರುವ ಕೋಡಿ ಶ್ರೀ ಬಸವೇಶ್ವರ ದೇವಾಲಯದ ಹುಂಡಿ.. ಇರುವ ಊರ ಜನರಲ್ಲಿ ಕದ್ದವರು ಯಾರು?

Last Updated : Jul 1, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.