ಹುಬ್ಬಳ್ಳಿ: ಕೊರೊನಾ ವಾರಿಯರ್ಸ್ಗಳಿಗೆ ಕಿಮ್ಸ್ ಸಿಇಒ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಿಬ್ಬಂದಿ ನಿರ್ದೇಶಕರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.
ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳಿಗೆ ಕಿರುಕುಳ ನೀಡುತ್ತಿದ್ದಾರೆ. 'ನೀನೊಬ್ಬ ಕೇವಲ ವೈದ್ಯ, ನಾನು ಅಧಿಕಾರಿ' ಎಂದು ಏಕವಚನದಲ್ಲಿ ಬೈತಾರೆ. ಇದಲ್ಲದೆ ಕಿರುಕುಳ ಪ್ರಶ್ನಿಸಿದ್ದಕ್ಕೆ ನರ್ಸ್ಗೆ ಶೋಕಾಸ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆಡಳಿತಾಧಿಕಾರಿ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಆಡಳಿತಾಧಿಕಾರಿ ವಿರುದ್ಧ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಮಗೆ ಕಿರುಕುಳವಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪಗೆ ಪತ್ರ ಬರೆದ್ದಾರೆ.